ಬಸ್ ಹತ್ತುವಾಗ ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮರು

0 211

ಮೂಡಿಗೆರೆ : ಮಹಿಳೆಯೊಬ್ಬರು ಬಸ್ ಹತ್ತುವಾಗ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಿತ್ತು ಖದೀಮರು ಪರಾರಿಯಾದ ಘಟನೆ ಮೂಡಿಗೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಡೆದಿದೆ.

ಕೊಟ್ಟಿಗೆಹಾರದ ತರುವೆ ಮೂಲದ ಮಹಿಳೆ ಯಶೋಧಮ್ಮ ಆಭರಣ ಕಳೆದುಕೊಂಡವರಾಗಿದ್ದು, 37 ಗ್ರಾಂ ತೂಕದ 1 ಲಕ್ಷ ರೂ. ಗಿಂತಲೂ ಹೆಚ್ಚು ಬೆಲೆ ಬಾಳುವ ಮಾಂಗಲ್ಯ ಸರ ಇದಾಗಿದೆ.

ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಸಿ.ಸಿ.ಕ್ಯಾಮೆರಾ ಇಲ್ಲದಿರುವುದು ಕಳ್ಳತನಕ್ಕೆ ಅನುಕೂಲಕರವಾಗಿದೆ ಎನ್ನಲಾಗಿದೆ.

ಈ ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!