ಬಿಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್ ಅಭಿಯಾನ

0 396

ಚಿಕ್ಕಮಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ (Karnataka Congress Government) ಘೋಷಿಸಿದ ಗ್ಯಾರಂಟಿಗಳ (Guarantee) ವಿರುದ್ಧ ಬಿಜೆಪಿ ಸರ್ಕಾರ (BJP Government) ಪೋಸ್ಟರ್ ಅಭಿಯಾನ (Poster Campaign) ಆರಂಭಿಸಿದ್ದು ಚಿಕ್ಕಮಗಳೂರು (Chikkamagaluru) ನಗರದಾದ್ಯಂತ ಪೋಸ್ಟರ್ ಅಂಟಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪೋಸ್ಟರ್ ಅಭಿಯಾನ ಆರಂಭಿಸಿದೆ.

ಅಲ್ಲದೆ ಎರಡು ದಿನಗಳ ಹಿಂದೆ ಯತೀಂದ್ರ ಸಿದ್ದರಾಮಯ್ಯ ಅವರು ಫೋನ್ ಮೂಲಕ ಮಾತನಾಡುವ ವಿಡಿಯೋ ಕೂಡಾ ವೈರಲ್ ಆಗಿತ್ತು ಅದರ ವಿರುದ್ದವೂ ಶ್ಯಾಡೋ ಸಿಎಂ ಪೋಸ್ಟರ್ ಅಂಟಿಸಿ ಬಿಜೆಪಿ ವ್ಯಂಗ್ಯವಾಡಿದೆ.

ತಾಲೂಕು ಆಫೀಸ್, ಮೆಸ್ಕಾಂ ಕಚೇರಿ, ತಾಲೂಕು ಪಂಚಾಯಿತಿ, ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಅಭಿಯಾನ ನಡೆಸಿದ ಬಿಜೆಪಿ ವ್ಯಂಗ್ಯ ಚಿತ್ರದ ಮೂಲಕ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದೆ.

ರಾಜ್ಯವನ್ನ ಕತ್ತಲೆಗೆ ದೂಡಿ ಇಂಧನ ಸಚಿವರು ನಾಪತ್ತೆ ಎಂದು ಪೋಸ್ಟರ್, ಕೆ.ಜೆ.ಜಾರ್ಜ್ ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಈ ತಿಂಗಳ ಕಪ್ಪ ಎಲ್ಲಿ ಎಂದು ಪ್ರಶ್ನೆ ಕೇಳಿರೋ ಸೋನಿಯಾ ಗಾಂಧಿ, ಈಗ ತಾನೇ ವಿದ್ಯುತ್ ಬಿಲ್ ಹೆಚ್ಚಳವಾಗಿದೆ… ಇರೀ ಮೇಮ್ ಎನ್ನುತ್ತಿರೋ ಇಂಧನ ಸಚಿವ ಹೀಗೆ ಹಲವು ರೀತಿಯ ಪೋಸ್ಟರ್ ಗಳನ್ನು ಅಂಟಿಸಿ ಸರ್ಕಾರದ ನಡೆ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.

Leave A Reply

Your email address will not be published.

error: Content is protected !!