ಬಿರಿಯಾನಿ ಸೇವಿಸಿದ್ದ 17 ಮಂದಿ ಅಸ್ವಸ್ಥ !

0 350

ಕಡೂರು: ತಾಲ್ಲೂಕಿನ ಮರವಂಜಿ ಗ್ರಾಮದ ಮನೆಯೊಂದರಲ್ಲಿ ನಡೆದ ಕೌಟುಂಬಿಕ ಕಾರ್ಯಕ್ರಮದಲ್ಲಿ ಮಾಂಸಾಹಾರ (Non Veg) ಸೇವಿಸಿ ಅಸ್ವಸ್ಥಗೊಂಡ (Indisposed) 17 ಮಂದಿ ಗ್ರಾಮಸ್ಥರು ಕಡೂರು (Kadur) ಸಾರ್ವಜನಿಕ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಮರವಂಜಿ ಗ್ರಾಮದಲ್ಲಿ ಭಾನುವಾರ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ತಯಾರಿಸಿದ ಬಿರಿಯಾನಿ (Biriyani) ಸೇವಿಸಿದ ಕೆಲವರಲ್ಲಿ ಸೋಮವಾರ ವಾಂತಿ-ಭೇಧಿ ಕಾಣಿಸಿಕೊಂಡು ಅಸ್ವಸ್ಥಗೊಂಡರು. ಕೂಡಲೇ ಗ್ರಾಮಸ್ಥರು ಅವರನ್ನು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಿದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಸ್.ಎನ್. ಉಮೇಶ್ ಹಾಗೂ ಸಿಬ್ಬಂದಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಆಸ್ಪತ್ರೆಯ ಮೂರು ಕೊಠಡಿಯಲ್ಲಿ ಅಸ್ವಸ್ಥರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗೂ ಪ್ರಾಣಾಪಾಯವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ದಾಖಲಾದವರ ಪೈಕಿ 8 ಪುರುಷರು, 9 ಮಹಿಳೆಯರು ಸೇರಿದ್ದಾರೆ.

ಶಾಸಕ ಕೆ.ಎಸ್. ಆನಂದ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ಪಸ್ಥಗೊಂಡ ರೋಗಿಗಳ ಬಗ್ಗೆ ಆಸ್ಪತ್ರೆಯ ವೈದ್ಯರಿಂದ ಮಾಹಿತಿ ಪಡೆದುಕೊಂಡರು, ಜಿಲ್ಲಾ ಪಂಚಾಯಿತು ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಭೋಗಪ್ಪ, ವಸಂತ್ ಕುಮಾರ್ , ಶಶಿಕುಮಾರ್, ಕೊನೆಮನೆರವಿ, ಕೃಷ್ಣಪ್ಪ ಇದ್ದರು.

Leave A Reply

Your email address will not be published.

error: Content is protected !!