ಮಹಿಳೆಯರ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದ ಚಿನ್ನದಂಗಡಿ ಮಾಲೀಕನಿಗೆ ಗೂಸಾ

0 245

ತರೀಕೆರೆ : ಚಿನ್ನದಂಗಡಿಗೆ ಬರುವ ಮಹಿಳೆಯರ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದ ಚಿನ್ನದಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ತರೀಕೆರೆ ಪಟ್ಟಣದ ಎಂ.ಜಿ.ರಸ್ತೆ ಚಿನ್ನದಂಗಡಿಯ ಮಾಲೀಕ ಅಮೀರ್ ಥಳಿತಕ್ಕೊಳಗಾದ ವ್ಯಕ್ತಿಯಾಗಿದ್ದು, ಅಂಗಡಿಗೆ ಬಂದಿದ್ದ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗುತ್ತಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು, ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಕಿಯ ತಾಯಿ ಸೇರಿದಂತೆ ಸಾರ್ವಜನಿಕರು ಅಂಗಡಿ ಮಾಲೀಕ ಅಮೀರನನ್ನು ಥಳಿಸಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!