ಮಹಿಳೆಯೊಂದಿಗೆ ಏಕಾಂತದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಟಿಹೆಚ್ಒ !

0 23,073

ಎನ್.ಆರ್.ಪುರ: ತಾಲ್ಲೂಕು ವೈದ್ಯಾಧಿಕಾರಿಯೊಬ್ಬ ಮಹಿಳೆಯೊಂದಿಗೆ ಏಕಾಂತದಲ್ಲಿ ಇದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಮಹಿಳೆಯ ಪತಿ ಹಾಗೂ ಕುಟುಂಬಸ್ಥರಿಂದ ಹಿಗ್ಗಾಮುಗ್ಗಾ ಪೆಟ್ಟು ತಿಂದ ಘಟನೆ ಬಾಳೆಹೊನ್ನೂರಿನಲ್ಲಿ ಬುಧವಾರ ನಡೆದಿದೆ.

ನಮ್ಮ ವಾಟ್ಸಾಪ್ ಚಾನೆಲ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.👇🏻
https://whatsapp.com/channel/0029Va5kUrE1CYoPwxJuii0N

ಎನ್.ಆರ್.ಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿರುವ ಮತ್ತು ಎನ್.ಆರ್.ಪುರ ತಾಲ್ಲೂಕು ವೈದ್ಯಾಧಿಕಾರಿಯಾಗಿರುವ ಡಾ. ಎಲ್ಡೋಸ್ ಮಹಿಳೆಯೊಂದಿಗೆ ಸಿಕ್ಕಿಬಿದ್ದು ಪೆಟ್ಟು ತಿಂದಾತ.

ಈ ಹಿಂದೆಯೂ ಸಸ್ಪೆಂಡ್ ಆಗಿದ್ದ ವೈದ್ಯ :

ಡಾ. ಎಲ್ಡೋಸ್ ಮಹಿಳೆಯೊಬ್ಬರನ್ನು ಬಾಳೆಹೊನ್ನೂರಿಗೆ ಕರೆತಂದು ಆರೋಗ್ಯ ಇಲಾಖೆ ವಸತಿ ಗೃಹದಲ್ಲಿ ಆಕೆಯೊಂದಿಗೆ ಏಕಾಂತದಲ್ಲಿ ಇದ್ದಾಗ ಮಹಿಳೆಯ ಪತಿ ಮತ್ತು ಕುಟುಂಬದವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.ಮಹಿಳೆಯನ್ನು ವಸತಿಗೃಹಕ್ಕೆ ಕರೆತಂದಿರುವ ವಿಷಯ ತಿಳಿದ ಮಹಿಳೆಯ ಪತಿ ಮತ್ತು ಕುಟುಂಬದವರು ಸ್ಥಳಕ್ಕೆ ಆಗಮಿಸಿ ವೈದ್ಯನ ಮೇಲೆ ಹಲ್ಲೆ ನಡೆಸಿದ್ದಾರೆ. ವೈದ್ಯನ ಮೇಲೆ ಕುಟುಂಬದವರು ಹಲ್ಲೆ ಮಾಡುತ್ತಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.ಡಾ.ಎಲ್ಡೋಸ್ ಈ ಹಿಂದೆ ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದ ಎಂದು ತಿಳಿದುಬಂದಿದೆ. ಹೆರಿಗೆ ಪ್ರಕರಣದಲ್ಲಿ ತಾಯಿಮಗು ಸಾವಿಗೆ ಕಾರಣರಾಗಿದ್ದು, ಗಲಾಟೆಯಾಗಿ ಸಸ್ಪೆಂಡ್ ಆಗಿ ನಂತರ ಎನ್.ಆರ್.ಪುರ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ವೈದ್ಯನ ಬಂಧನ, ಆತ್ಯಾಚಾರ ಕೇಸ್ ದಾಖಲು

ಎನ್.ಆರ್.ಪುರ ಮೂಲದವರೇ ಆದ ಡಾ. ಎಲ್ಡೋಸ್ ಈ ಹಿಂದೆಯೂ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಪ್ರಕರಣಗಳು ನಡೆದಿದ್ದವು ಎನ್ನಲಾಗಿದೆ. ಡಾ. ಎಲ್ಡೋಸ್ ಚಿಕ್ಕಮಗಳೂರು ಜಿಲ್ಲಾ ವೈದ್ಯರ ಸಂಘದ ಪದಾಧಿಕಾರಿಯೂ ಆಗಿದ್ದಾನೆ ಎಂದು ತಿಳಿದುಬಂದಿದೆ. ಇಂತಹ ನೀಚ ಕೃತ್ಯದಲ್ಲಿ ತೊಡಗಿರುವ ವೈದ್ಯನನ್ನು ಅಮಾನತು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ವೈದ್ಯನನ್ನು ಬಂಧಿಸಿ ಆತ್ಯಾಚಾರ ಪ್ರಕರಣವನ್ನು ದಾಖಲಾಸಿದ್ದಾರೆ.

Leave A Reply

Your email address will not be published.

error: Content is protected !!