ಮೂವರನ್ನು ಬಲಿ ಪಡೆದ ನರಹಂತಕ ಕಾಡಾನೆ ಸೆರೆಗೆ ಆದೇಶ

0 456

ಚಿಕ್ಕಮಗಳೂರು : ಮಲೆನಾಡು (Malenadu) ಭಾಗದಲ್ಲಿ ಮೂವರನ್ನು ಬಲಿ ಪಡೆದ ನರಹಂತಕ ಕಾಡಾನೆಯನ್ನು (Elephant) ಸೆರೆ ಹಿಡಿಯುಲು ಆದೇಶಿಸಲಾಗಿದೆ.

ಮಲೆನಾಡಲ್ಲಿ ಮೂರು ಕಾಡಾನೆಗಳನ್ನು ಹಿಡಿಯಲು ಆದೇಶಿಸಿದ್ದು, ಇಂದಿನಿಂದಲೇ ನರಹಂತಕ ಕಾಡಾನೆ ಸೇರಿದಂತೆ 2 ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ನಿರಂತರ ಕಾಡಾನೆ ದಾಳಿಯಿಂದ ಮೂಡಿಗೆರೆ ಜನರು ತತ್ತರಿಸಿದ್ದು, ಜನರ ಆಕ್ರೋಶ, ಪ್ರತಿಭಟನೆ ಹಿನ್ನೆಲೆ ಆನೆ ಸೆರೆಹಿಡಿಯಲು ಆದೇಶಿಸಲಾಗಿದ್ದು, ಪುಂಡಾನೆಗಳನ್ನು ಸೆರೆಹಿಡಿದು ರೆಡಿಯೋ ಕಾಲರಿಂಗ್ ಅಳವಡಿಸಲು ಸೂಚಿಸಲಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸಾಕಾನೆಗಳ ಮೂಲಕ ಒಂಟಿ ಸಲಗ ಸೆರೆಹಿಡಿಯುವ ಕಾರ್ಯಾಚರಣೆ ನಡೆಸಲಾಗಿದ್ದು, ಆನೆಯನ್ನು ಸೆರೆ ಹಿಡಿದು ಭದ್ರಾ ಸಂರಕ್ಷಿತಾ ಪ್ರದೇಶಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿದೆ.

Leave A Reply

Your email address will not be published.

error: Content is protected !!