ಲಾಂಗ್ ಬೀಸಿದ ದುಷ್ಕರ್ಮಿ ; ವ್ಯಕ್ತಿಯ ಹೆಬ್ಬೆರಳು ಕಟ್

0 333

ಚಿಕ್ಕಮಗಳೂರು: ಹಳೇ ದ್ವೇಷದ ಹಿನ್ನೆಲೆ ಯುವಕನೋರ್ವ ಲಾಂಗ್ ಬೀಸಿದ ಪರಿಣಾಮ ವ್ಯಕ್ತಿಯ ಹೆಬ್ಬೆರಳು ತುಂಡಾಗಿರು ಘಟನೆ ನಗರದಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಸಗನಿಪುರದಲ್ಲಿ ಘಟನೆ ನಡೆದಿದ್ದು, ಕುಮಾರಸ್ವಾಮಿ ಎಂಬ ವ್ಯಕ್ತಿಯ ಮೇಲೆ ಯುವಕ ಕೌಶಿಕ್ ಹಳೆ ದ್ವೇಷದ ಹಿನ್ನೆಲೆ ಲಾಂಗ್ ಬೀಸಿದ್ದು ಈ ವೇಳೆ ಲಾಂಗ್ ತಗುಲಿ ಕುಮಾರಸ್ವಾಮಿಯ ಹೆಬ್ಬೆರಳು ತುಂಡಾಗಿದೆ. ತಕ್ಷಣ ಕುಮಾರಸ್ವಾಮಿ ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದ್ಯದ ಅಮಲಿನಲ್ಲಿ ಯುವಕ ದಾಳಿ ನಡೆಸಿದ್ದಾನೆ ಎನ್ನಲಾಗುತ್ತಿದ್ದು ಭಯಭೀತರಾದ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣದ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave A Reply

Your email address will not be published.

error: Content is protected !!