ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸಾವು !

0 992

ಕಡೂರು : ವಿದ್ಯುತ್ ತಂತಿಗೆ (Current Line) ಅಲ್ಯೂಮಿನಿಯಂ ಏಣಿ (Ladder) ತಗುಲಿ ಯುವಕ ಸಾವನ್ನಪ್ಪಿರುವ (Death) ಘಟನೆ ಕಡೂರು (Kadur) ತಾಲೂಕಿನ ಪಟ್ಟಣಗೆರೆ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಅಭಿಷೇಕ್ (27) ಎಂದು ಗುರುತಿಸಲಾಗಿದೆ. ಮೃತ ಅಭಿಷೇಕ್ ಗೆ ಮೂರು ಎಕರೆ ಅಡಿಕೆ (Arecanut) ತೋಟವಿತ್ತು. ಅದೇ ತೋಟದಲ್ಲಿ ತೆಂಗಿನ ಮರಗಳು ಕೂಡ ಇದ್ದವು. ನ.26ರ ಭಾನುವಾರ ಸಂಜೆ ತೋಟದಲ್ಲಿ ತೆಂಗಿನಕಾಯಿ ಕೀಳಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.

ತೋಟದಲ್ಲಿ ಒಂದು ಮರದಿಂದ ಮತ್ತೊಂದು ತೆಂಗಿನ ಮರದ ಬಳಿ ಹೋಗುವಾಗ ಅಲ್ಯುಮಿನಿಯಂ ಏಣಿ ಎತ್ತಿಕೊಂಡು ಹೋಗುವಾಗ ಪ್ರೈಮರಿ ಲೈನ್ (11 KV) ವಿದ್ಯುತ್ ತಂತಿಗೆ ಏಣಿ ತಗುಲಿ ಸಾವನ್ನಪ್ಪಿದ್ದಾನೆ.

ವಿದ್ಯುತ್ ಶಾಕ್ ನಿಂದ ತೋಟದಲ್ಲೇ ಬಿದ್ದಿದ್ದ ಅಭಿಷೇಕ್ ನನ್ನು ಕೂಡಲೇ ಕಡೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಕೂಡ ತೀವ್ರವಾದ ವಿದ್ಯುತ್ ಶಾಕ್ ನಿಂದ ಅಭಿಷೇಕ್ ಅಸುನೀಗಿದ್ದಾನೆ.

ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave A Reply

Your email address will not be published.

error: Content is protected !!