ಹಸು ಹುಡುಕಲು ಹೋದ ವ್ಯಕ್ತಿಗೆ ಕಾಡುಕೋಣ ತಿವಿದು ಗಂಭೀರ ಗಾಯ

0 584

ಕೊಪ್ಪ: ಹಸು ಹುಡುಕಲು ಹೋದಾಗ ವ್ಯಕ್ತಿಯೊಬ್ಬರ ಮೇಲೆ ಕಾಡುಕೋಣ ದಾಳಿ ಮಾಡಿದ್ದು, ವ್ಯಕ್ತಿಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಅತ್ತಿಕುಡಿಗೆ ನೇರಳೆಕಟ್ಟೆ ಗ್ರಾಮದಲ್ಲಿ ನಡೆದಿದೆ.

ಗಾಯಾಳುವನ್ನು ಪ್ರಭಾಕರ (45) ಎಂದು ಗುರುತಿಸಲಾಗಿದೆ. ಹಸು ಹುಡುಗಲು ಹೋದಾಗ ಬೆನ್ನತ್ತಿ ಬಂದ ಕಾಡುಕೋಣ ರಭಸವಾಗಿ ತಿವಿದಿದೆ. ಗಾಯಗೊಂಡು ನರಲಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆನ್ನು, ತೊಡೆ, ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

Leave A Reply

Your email address will not be published.

error: Content is protected !!