ಹಾವು ಕಡಿದು ಎರಡು ದಿನಗಳ ಬಳಿಕ ಮಹಿಳೆ ಸಾವು !

0 851

ಎನ್.ಆರ್.ಪುರ: ಹಾವು ಕಡಿದು (Sneak Bite) ಎರಡು ದಿನಗಳ ಬಳಿಕ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ಅಂಡವಾನೆ ಗ್ರಾಮದಲ್ಲಿ ನಡೆದಿದೆ.


ಅಂಡವಾನೆ ಗ್ರಾಮದ ಸುಜಾತಾ (50) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ತೋಟದಲ್ಲಿ ಕೆಲಸ ಮಾಡುವಾಗ ಸುಜಾತಾ ಅವರಿಗೆ ಹಾವು ಕಡಿದಿದೆ. ಆ ಬಳಿಕ ಪತಿ ವೆಂಕಟೇಶ್ ಗೌಡ ಅವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು.

ನಾನು ಕ್ಷೇಮವಾಗಿದ್ದೇನೆ ಏನೂ ಆಗಿಲ್ಲ ಎಂದು ಮನೆಗೆ ಮರಳಿದ್ದರು. ಮರು ದಿನವೂ ಆಸ್ಪತ್ರೆಗೆ ಹೋಗಿ ಬಿಪಿ, ಶುಗರ್ ಪರೀಕ್ಷೆ ಮಾಡಿಸಿಕೊಂಡಾಗ ಆರೋಗ್ಯವಾಗಿ ಸಾಮಾನ್ಯವಾಗಿದ್ದರು.

ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ಸುಸ್ತು ಎಂದು ಆಸ್ಪತ್ರೆಗೆ ಹೋಗಿದ್ದು ಸಾವನ್ನಪ್ಪಿದ್ದಾರೆ ಎಂದು ಪತಿ ದೂರು ನೀಡಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!