ಹೆಲ್ಮೆಟ್ ಹಾಕದ ವಕೀಲನ ಮೇಲೆ ಹಲ್ಲೆ ; ಪಿಎಸ್ಐ ಸೇರಿ 6 ಮಂದಿ ಸಸ್ಪೆಂಡ್ !

0 1,722

ಚಿಕ್ಕಮಗಳೂರು : ಹೆಲ್ಮೆಟ್ (Helmet) ವಿಚಾರವಾಗಿ ವಕೀಲರೊಬ್ಬರ (Lawyer) ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಚಿಕ್ಕಮಗಳೂರು (Chikkamagaluru) ನಗರ ಪೊಲೀಸ್ ಠಾಣೆಯ (Police station) ಪಿಎಸ್ಐ ಮಹೇಶ್ ಪೂಜಾರಿ ಸೇರಿದಂತೆ ಆರು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್ಪಿ ವಿಕ್ರಂ ಅಮ್ಟೆ ಆದೇಶಿಸಿದ್ದಾರೆ.

ಹೆಲ್ಮೆಟ್ ವಿಚಾರವಾಗಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಲಾಗಿತ್ತು. ಠಾಣೆಯಲ್ಲಿ ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಠಾಣೆ ಮುಂದೆ ಜಮಾಯಿಸಿದ್ದ ವಕೀಲರು ಆಕ್ರೋಶ ಹೊರಹಾಕಿದ್ದರು. ಸ್ಥಳಕ್ಕೆ ಆಗಮಿಸಿದ ಎಸ್ಪಿ ವಿಕ್ರಂ, ವಿಚಾರಣೆ ನಡೆಸಿದ್ದರು.

ಪಿಎಸ್​ಐ ಸೇರಿದಂತೆ ಆರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಹಲ್ಲೆ ಮಾಡಿದ ಪೊಲೀಸರನ್ನ ಬಂಧಿಸುವಂತೆ ಪಟ್ಟು ಹಿಡಿದ ವಕೀಲರು, ಠಾಣೆಯಿಂದ ಎಸ್​ಪಿ ತೆರಳದಂತೆ ಅಡ್ಡ ಕುಳಿತಿದ್ದರು.

ಹಲ್ಲೆ ಪ್ರಕರಣ ಸಂಬಂಧ ಆರು ಮಂದಿ ವಿರುದ್ಧ ಐಪಿಸಿ ಸೆಕ್ಷನ್​​​​​​ 307, 324, 506, 504ರ ಅಡಿ ಪ್ರಕರಣ ದಾಖಲಾಗಿದೆ. ಇನ್ನು, ಪೊಲೀಸರ ದೌರ್ಜನ್ಯ ಖಂಡಿಸಿ ಚಿಕ್ಕಮಗಳೂರು ಬಾರ್​​ ಕೌನ್ಸಿಲ್​ ಸದಸ್ಯರು ನಗರದಲ್ಲಿ ಇಂದು ಪ್ರತಿಭಟನೆಗೆ ಕರೆ ನೀಡಿದ್ದಾರೆ.

Leave A Reply

Your email address will not be published.

error: Content is protected !!