ಸುಳ್ಳಿನ ಮೂಲಕ ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಮಾಡುವ ಯತ್ನಗಳು ವ್ಯರ್ಥ ; ಹೆಚ್.ಡಿ ಕುಮಾರಸ್ವಾಮಿ

ಚಿಕ್ಕಮಗಳೂರು: ಸರ್ಕಾರ (Government) ನಮ್ಮ ಬಾಯಿ ಏನೇ ಪ್ರಯತ್ನ ಮಾಡಿದರು ಅದು ಸಾಧ್ಯವಿಲ್ಲ. ಇದು ಸ್ಪಷ್ಟ. ನಮ್ಮನ್ನು ಹೆದರಿಸಲೂ ಆಗುವುದಿಲ್ಲ. ಸುಳ್ಳಿನ ಮೂಲಕ ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಮಾಡುವ ಯತ್ನಗಳು ವ್ಯರ್ಥವಾಗುತ್ತದೆ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (H.D Kumaraswamy) ತಿಳಿಸಿದರು

ಅವರು ಭಾನುವಾರ ತಾಲ್ಲೂಕಿನ ಹೊಸಪೇಟೆ ಗ್ರಾಮ ಹನಿಡ್ಯೂ ಎಕ್ಸೋಟಿಕಾ ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲವನ್ನೂ ಸರಿಪಡಿಸಿಕೊಂಡರೇ ಒಳ್ಳೆಯದು ಇಲ್ಲವಾದಲ್ಲಿ ಸರ್ಕಾರವೇ ಬೆಲೆ ತೆರಬೇಕಾಗುತ್ತದೆ. ಆದರೆ ಅಷ್ಟರೊಳಗಿ ನಾಡಿನ ಜನರ ಬದುಕು ಏನಾಗುತ್ತದೆ ಎನ್ನುವುದು ನಮ್ಮ ಚಿಂತನೆ ಎಂದರು.

ಬರದಿಂದಾಗಿ ನಾಡಿನ ಜನತೆ ದೊಡ್ಡ ಮಟ್ಟದ ತೊಂದರೆಗೆ ಸಿಕ್ಕಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬಿ ಬದುಕು ಕಟ್ಟಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿಲ್ಲ, ಸರ್ಕಾರದ ಅಕ್ರಮ ತೀರ್ಮಾನಗಳನ್ನು ಬಯಲಿಗೆ ತರುವುದು ವಿರೋಧ ಪಕ್ಷದ ಕೆಲಸ. ಬಿಜೆಪಿ (Bjp) ಇರಬಹುದು ನಮ್ಮ ಪಕ್ಷದ ಸ್ನೇಹಿತರಿರಬಹುದು ಎಂದರು.

ಬರ ವೀಕ್ಷಣೆ ಮಾಡಿದಾಗ ಲಘುವಾಗಿ ಕಾಂಗ್ರೆಸಿಗರು ಮಾತನಾಡಿದರು. ಕೇಂದ್ರದ ಬಳಿ ಹೋಗಿ ಹಣ ಕೊಡಿಸಿ ಎಂದರು. ನಾಡಿನ ಜನತೆಯನ್ನೇ ಕೀಳಾಗಿ ನೋಡುವ ಸರ್ಕಾರ ವಿರೋಧ ಪಕ್ಷಗಳನ್ನ ಮೂರನೇ ದರ್ಜೆ ರೀತಿ ಅಗೌರವ ಸಲ್ಲಿಸುತ್ತಿದೆ, ಗ್ಯಾರಂಟಿ ಯೋಜನೆ ಮೂಲಕ ಬಡವರಿಗೆ ನೆಮ್ಮದಿ ಸಿಕ್ಕಿದೆ ಎಂದು ಸರ್ಕಾರದ ಜಾಹೀರಾತು ಹೇಳುತ್ತಿದೆ. ಜಾಹೀರಾತುಗಳು ಬದುಕು ಕೊಡುವುದಿಲ್ಲ. ನಿಮ್ಮ ಆಡಳಿತ ಹೇಗೆ ಕೆಲಸ ಮಾಡುತ್ತಿದೆ, ವಾಸ್ತವಾಂಶ ಏನು ಎನ್ನುವುದು ಮುಖ್ಯ ಎಂದರು.

ಕಳೆದ 3 ತಿಂಗಳಿನಿಂದ ಮಳೆ ಕೊರತೆ ಬಗ್ಗೆ, ರೈತರು ಬಿತ್ತಿರುವ ಬೆಳೆ ಹಾನಿಯಾಗಿರುವ ಬಗ್ಗೆ ಹಾಗೂ ಈ ವರ್ಷ ಆಹಾರ ಬೆಳೆ ಗುರಿಯಲ್ಲಿ ಶೇ.50 ರಷ್ಟೂ ಸಾಧನೆ ಆಗುವುದಿಲ್ಲ ಎನ್ನುವದನ್ನು ಹೇಳುತ್ತಲೇ ಬಂದಿದ್ದೇವೆ ಆದರೆ ಯಾವುದಕ್ಕೂ ಪರಿಹಾರವಿಲ್ಲ ಎಂದು ಆರೋಪಿಸಿ, ಕಾಫಿ ಬೆಳೆಗಾರರೂ ನೆಮ್ಮದಿಯಿಂದಿಲ್ಲ. ಬೆಲೆಯೂ ಕುಸಿದಿದೆ. ಬೆಳೆಯೂ ಇಲ್ಲ. ಜೋಳ, ಭತ್ತ, ತೊಗರಿ, ಕೊಬ್ಬರಿ ಬೆಳೆದ ರೈತರ ಸ್ಥಿತಿ ಹೇಳ ತೀರದ್ದಾಗಿದೆ. ಕೊಬ್ಬರಿಗೆ ಬೆಂಬಲ ಬೆಲೆ ಕೊಡುತ್ತೇವೆ ಎಂದರು ಬಿಡಿಗಾಸು ಕೊಡಲಿಲ್ಲ. ಹೇಳಿಕೆಗೆ ಸೀಮಿತವಾದ ಸರ್ಕಾರ ಇದು ಎಂದು ಟೀಕಿಸಿದರು.

ಕೇಂದ್ರ ಸರ್ಕಾರದ ಮೇಲೆ ಪ್ರತಿನಿತ್ಯ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ಕಳೆದ 75 ವರ್ಷದಲ್ಲಿ ದೇವೇಗೌಡರ 10 ತಿಂಗಳ ಅವಧಿಯಲ್ಲಿ ನೀರಾವರಿಗೆ ಕೊಟ್ಟ ಬಳುವಳಿ ಹೊರತು ಪಡಿಸಿ ಹಲವು ನ್ಯಾಯಯುತ ಹಕ್ಕು ಪಡೆಯಲು ಆಗಿಲ್ಲ. ಇದು ನಿನ್ನೆ ಮೊನ್ನೆಯದ್ದಲ್ಲ. ಕಾಂಗ್ರೆಸ್‌ನ 28 ಮಂದಿ ಸಂಸದರಿದ್ದಾಗಲೂ ಈ ರಾಜ್ಯ ಎಂತಹ ಪರಿಸ್ಥಿತಿ ಎದುರಿಸಿತ್ತು ಎನ್ನುವ ಇತಿಹಾಸ ಇದೆ. ಅದರ ಕಡೆ ಬೆಟ್ಟು ತೋರಿಸುವುದನ್ನು ಸರ್ಕಾರ ಬಿಡಬೇಕು ಎಂದರು.

ನಮ್ಮ ನಾಡಿನ ಜನರು ಕೊಡುತ್ತಿರುವ ಹಣವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಬಿಡಿ. ಮಕ್ಕಳಿಗೆ ಶಾಲೆಗೆ ಹೋಗಲು ಬಸ್‌ಗಳಿಲ್ಲ. ಜೆಸಿಬಿಗಳಲ್ಲಿ, ಟಾಂಟಾಂಗಳಲ್ಲಿ ಕುಳಿತು ಪ್ರಯಾಣಿಸುತ್ತಿರುವುದನ್ನು ನೋಡುತ್ತಿದ್ದೇವೆ. ಸೈಕಲ್ ಕೊಡುವುದನ್ನೂ ನಿಲ್ಲಿಸಿದ್ದೀರಿ. ಶಕ್ತಿ ಯೋಜನೆ ಎನ್ನುತ್ತೀರಿ ಬಸ್‌ಗಳು ಅಲ್ಲಲ್ಲೇ ನಿಂತಿರುತ್ತವೆ ಎಂದರು.

ದತ್ತಮಾಲೆ:
ದತ್ತಮಾಲೆಯನ್ನು ಯಾಕೆ ಹಾಕಬಾರದು, ದೇವರ ಕಾರ್ಯದಲ್ಲಿ ಹಾಕಬೇಕಾಗಿ ಬಂದರೆ ಹಾಕುತ್ತೇನೆ. ನಮ್ಮ ಸಂಸ್ಕೃತಿಯನ್ನ ಉಳಿಸಲಿಕ್ಕೆ ಕಾನೂನುಬದ್ಧವಾಗಿ ಏನು ಬೇಕಾದರೂ ಮಾಡಲು ತಯಾರಿದ್ದೇನೆ ಹೇಳಿದರು.

ಈ ವೇಳೆ ಜಾತ್ಯತೀತತೆ ಅಡ್ಡ ಬರುವುದಿಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದು ಜಾತ್ಯಾತೀತ, ಅದರ ಅರ್ಥವೇನು? ಒಬ್ಬ ಮಂತ್ರಿ ಅಲ್ಲೆಲ್ಲೋ ಹೋಗಿ ನಮ್ಮ ಸಮಾಜದ ಸ್ಪೀಕರ್ ಖಾದರ್ ಅವರಿಗೆ ಬಿಜೆಪಿ ಶಾಸಕರು ನಿಂತು ಕೈ ಮುಗಿಯುವಂತೆ ಮಾಡಿದ್ದೇವೆ ಎಂದು ಹೇಳಿಲ್ಲವೇ? ಇದು ಜಾತ್ಯಾತೀತವೇ? ಜಾತ್ಯತೀತತೆ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ಯಾವ ಯೋಗ್ಯತೆ ಇದೆ ಎಂದು ತರಾಟೆಗೆ ತೆಗೆದುಕೊಂಡರಲ್ಲದೆ, ಅವರಿಗೆ ಅಷ್ಟು ಧರ್ಮಾಭಿಮಾನ ಇದ್ದಾಗ ನಮ್ಮ ಧರ್ಮದ ವಿಚಾರ ಬಂದಾಗ ಭಯ ಬೀಳಬೇಕಾ ಎಂದು ಪ್ರಶ್ನಿಸಿದರು.

ಯಾರಿಗೂ ಭಯ ಭಕ್ತಿ ಇಲ್ಲ:
ಸರ್ಕಾರ ಬಂದ 6 ತಿಂಗಳಲ್ಲಿ ಕೊಲೆ ದರೋಡೆಗಳು ನಡೆಯುತ್ತಿದೆ. ಯಾರಿಗೂ ಭಯ ಭಕ್ತಿ ಇಲ್ಲ ದೂರಿದರು.

ಅಧಿಕಾರಿಗಳನ್ನು ರಾಜಾರೋಷವಾಗಿ ಕೊಲೆ ಮಾಡಲಾಗುತ್ತದೆ. ನಾಡಿನ ಜನಿರಿಗೆ ನೆಮ್ಮದಿ ಇಲ್ಲ. ಹೊರಕ್ಕೆ ಹೋದವರು ಜೀವಂತವಾಗಿ ಮನೆಗೆ ಬರುವುದೇ ಅನುಮಾನ ಎನ್ನುವ ಭಯ ಸೃಷ್ಠಿಯಾಗಿದೆ. ಇದರ ಬಗ್ಗೆ ಏನೂ ಚಿಂತನೆ ಇಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಇಲಾಖೆ ಎಷ್ಟು ಕೊಲೆ ದರೋಡೆ ನಿಲ್ಲಿಸಲು, ಕ್ರಿಮಿನಲ್‌ಗಳಿಗೆ ಭಯ ಹುಟ್ಟಿಸಲು ಎಷ್ಟು ಯಶಸ್ಸಾಗಿದೆ ಎಂದು ಪ್ರಶ್ನಿಸಿದ ಅವರು, ಬೆಂಗಳೂರು ನಗರದಂತಹ ಕಡೆ ಕರೆಂಟ್ ವೈರ್ ಬಿದ್ದು ತಾಯಿ, ಮಗು ಸುಟ್ಟು ಕರಕಲಾಗುತ್ತಾರೆ. ಇನ್ನು ಹಳ್ಳಿಗಳ ಕಡೆ ಜನರ ಪಾಡೇನು? ಇದು ಇವರ ಸಮರ್ಥವಾದ ಆಡಳಿತ ಎಂದು ಕಿಡಿಕಾರಿದರು.

ನನ್ನನ್ನು ಕರೆಂಟ್ ಕಳ್ಳ ಎಂದು ಕರೆದು ನೀವು ದರೋಡೆ ಮಾಡುತ್ತಾ ಕುಳಿತಿದ್ದೀರಿ. ನಾನು ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ ಎಂದಿದ್ದಾರೆ. ಈ ದೇಶದ ವ್ಯವಸ್ಥೆಯಲ್ಲಿ ಅವರನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ. ಅವರು ಯಾರನ್ನು ಬೇಕಾದರೂ ಗಲ್ಲಿಗೇರಿಸುತ್ತಾರೆ. ಸೋಭಾ ಡೆವಲಪರ್‍ಸ್ ಪಕ್ಕದಲ್ಲಿ ಮಾಲೊಂದನ್ನು ಕಟ್ಟಿದ್ದಾರೆ. ರಾಜೇಂದ್ರ ಚೋಳನ್ ಎನ್ನುವ ಬೆಸ್ಕಾಂ ಎಂಡಿ 6 ತಿಂಗಳು ಸೋಭಾ ಅಪಾರ್ಟ್‌ಮೆಂಟ್‌ನಲ್ಲಿದ್ದರಲ್ಲ. ಆಫ್ಲ್ಯಾಟ್‌ಗೆ ಎಷ್ಟು ವಿದ್ಯುತ್ ಬಿಲ್‌ ಬಂದಿತ್ತು ಹೇಳಿ. ನಮ್ಮನ್ನು ಕೆದಕಲು ಹೋಗಬೇಡಿ ಎಂದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

4 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

4 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

4 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

4 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

4 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

4 days ago