BJP ಟಿಕೆಟ್ ನನಗೆ ಬೇಕೆಂದು BSNL ಟವರ್ ಏರಿದ್ದಾನೆ ಇಲ್ಲೊಬ್ಬ ಭೂಪ !

0 38

ಅಜ್ಜಂಪುರ : ವಿಧಾನಸಭೆ ಚುನಾವಣೆ ರಂಗೇರಿದೆ. ಭರಪೂರ ನಾಮಪತ್ರಗಳು ಸಲ್ಲಿಕೆಯಾಗುತ್ತಿವೆ. ಮತ್ತೊಂದು ಕಡೆ ಟಿಕೆಟ್ ವಂಚಿತರು ಬಂಡಾಯದ ಬಾವುಟ ಹಾರಿಸುತ್ತಿದ್ದರೇ, ಇಲ್ಲೊಬ್ಬ ಭೂಪ ಬಿಜೆಪಿ ಟಿಕೆಟ್ ನನಗೆ ಬೇಕೆಂದು ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಏರಿ ಹಠ ಹಿಡಿದಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಶಿವನಿ ಆರ್.ಎಸ್.ಗ್ರಾಮದಲ್ಲಿ ಘಟನೆ ನಡೆದಿದ್ದು, ಶಿವನಿ ಆರ್.ಎಸ್. ಗ್ರಾಮದ ರಂಗಪ್ಪ ಎಂದು ಗುರುತಿಸಲಾಗಿದೆ. ಅಜ್ಜಂಪುರ ತರೀಕೆರೆ ವಿಧಾನಸಭಾ ವ್ಯಾಪ್ತಿಗೆ ಒಳಪಟ್ಟಿದ್ದು, ಬಿಜೆಪಿಯಿಂದ ಈಗಾಗಲೇ ಡಿ.ಎಸ್.ಸುರೇಶ್ ಕಣಕ್ಕಿಳಿದಿದ್ದಾರೆ. ಈ ನಡುವೆ ರಂಗಪ್ಪ, ನನಗೆ ಬಿಜೆಪಿ ಟಿಕೆಟ್ ಬೇಕೇ ಬೇಕು ಅಂತ ಪಟ್ಟು ಹಿಡಿದು ಮೊಬೈಲ್ ಟವರ್ ಏರಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ರಂಗಪ್ಪನನ್ನು ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ರಂಗಪ್ಪ ಕಳೆದ 15 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿದ್ದು ಟಿಕೆಟ್‌ಗಾಗಿ ಹಠ ಹಿಡಿದು ಟವರ್ ಏರಿದ್ದು ಪೊಲೀಸರು ಮನವೊಲಿಸಿ ಕೆಳಗಿಳಿಸಿದ್ದಾರೆ.

Leave A Reply

Your email address will not be published.

error: Content is protected !!