Chikkamagaluru | ದತ್ತ ಜಯಂತಿ ಹಿನ್ನೆಲೆ ಪ್ರಮುಖ ರಸ್ತೆಗಳಲ್ಲಿ ವಾಹನಗಳ ನಿಲುಗಡೆ, ಸಂಚಾರ ನಿಷೇಧ – ಭಾರಿ ವಾಹನಗಳ ಸಂಚಾರಕ್ಕೆ ಬದಲಿಗೆ ಮಾರ್ಗ ; ಮೀನಾ ನಾಗರಾಜ್

0 101

ಚಿಕ್ಕಮಗಳೂರು: ದತ್ತ ಮಾಲಾ ಅಭಿಯಾನ 2023 ನವೆಂಬರ್ 5 ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ಮೆರವಣಿಗೆ ಇರುವುದರಿಂದ ಮೆರವಣಿಗೆಯಲ್ಲಿ ಅಧಿಕ ಸಂಖ್ಯೆಯಲ್ಲಿ ದತ್ತ ಮಾಲಾಧಾರಿಗಳು/ದತ್ತ ಭಕ್ತರು ಭಾಗವಹಿಸುತ್ತಿದ್ದು, ಶೋಭಾಯಾತ್ರೆ ಮೆರವಣಿಗೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಶಂಕರಮಠದಿಂದ ಪ್ರಾರಂಭವಾಗಿ ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ ಮುಖಾಂತರ ಅಜಾದ್ಪಾರ್ಕ್ ವೃತ್ತದ ವರೆಗೆ ನಡೆಯಲಿದೆ.


ನವೆಂಬರ್ 05 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಬಸವನಹಳ್ಳಿ ಮುಖ್ಯ ರಸ್ತೆ, (ಕೆ ಇ ಬಿ ಈದ್ಗಾ ಸರ್ಕಲ್‌ನಿಂದ ಹನುಮಂತಪ್ಪ ವೃತ್ತದವರೆಗೆ ) ಎಂ.ಜಿ. ರಸ್ತೆ (ಹನುಮಂತಪ್ಪ ವೃತ್ತದಿಂದ ಅಜಾದ್ ಪಾರ್ಕ್ ವೃತ್ತದವರೆಗೆ) ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದ್ದು ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕ ವಾಹನಗಳು ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗುವ ಸಾರ್ವಜನಿಕ ವಾಹನಗಳಿಗೆ ರತ್ನಗಿರಿ ರಸ್ತೆ (ಆರ್.ಜಿ. ರಸ್ತೆ) ಯಲ್ಲಿ ಸಂಚರಿಸುವುದು. ಎಂ.ಜಿ. ರಸ್ತೆಯಲ್ಲಿ ಸಾಗುವ ಸಾರ್ವಜನಿಕ ವಾಹನಗಳು ಐ.ಜಿ. ರಸ್ತೆ ಮತ್ತು ಅಂಬೇಡ್ಕರ್ ರಸ್ತೆ (ಮಾರ್ಕೆಟ್ ರಸ್ತೆಯಲ್ಲಿ) ಸಂಚರಿಸಲು ಅವಕಾಶ ನೀಡಲಾಗಿದೆ.


ಚಿಕ್ಕಮಗಳೂರು ನಗರದಲ್ಲಿ ಕೆ.ಎಂ. ರಸ್ತೆ ಮುಖಾಂತರ ಸಂಚರಿಸುವ ಭಾರಿ ವಾಹನಗಳು ಕಡೂರು ಕಡೆಯಿಂದ ಮೂಡಿಗೆರೆ ಕಡೆಗೆ ಹೋಗುವ ಭಾರಿ ವಾಹನಗಳು ಎಐಟಿ ಸರ್ಕಲ್, ಬೈಪಾಸ್, ಪೈ ಸರ್ಕಲ್, ಹಿರೇಮಗಳೂರು, ಕೈಗಾರಿಕಾ ಪ್ರದೇಶ, ರಾಂಪುರ ಮೂಲಕ ಸಂಚರಿಸುವುದು.
ಮೂಡಿಗೆರೆ ಕಡೆಯಿಂದ ಕಡೂರು ಕಡೆಗೆ ಹೋಗುವ ಭಾರಿ ವಾಹನಗಳು ರಾಂಪುರ, ಕೈಗಾರಿಕಾ ಪ್ರದೇಶ, ಹಿರೇಮಗಳೂರು, ಪೈ ಸರ್ಕಲ್, ಬೈಪಾಸ್, ಎಐಟಿ ಸರ್ಕಲ್ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!