ಅತಿಯಾದ ಒತ್ತಡ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ; ಡಾ. ವಿನಯ್

0 0


ಚಿಕ್ಕಮಗಳೂರು : ಅತಿಯಾದ ಒತ್ತಡವು ವ್ಯಕ್ತಿಯ ಆರೋಗ್ಯ ಹಾಗೂ ಯೋಗಕ್ಷೇಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ಶರೀರವನ್ನು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗುವಂತೆ ಮಾಡು ತ್ತದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ. ಕೆ.ಎಸ್.ವಿನಯ್‌ಕುಮಾರ್ ಹೇಳಿದರು.


ನಗರದ ಜಿಲ್ಲಾ ಕಾರಾಗೃಹದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಸಿಬ್ಬಂದಿಗಳಿಗೆ ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಭವಿಷ್ಯದ ಆಲೋಚನೆ ಮತ್ತು ಚಿಂತೆಯ ಪರಿಣಾಮವಾಗಿ ಅನೇಕ ಜನರು ಒತ್ತಡವನ್ನು ಅನುಭವಿಸುತ್ತಾರೆ. ಈ ರೀತಿಯ ಒತ್ತಡವು ಅತಿಯಾದ ವಿಶ್ಲೇಷಣೆ ಮತ್ತು ವಾಸ್ತವವಾಗಿ ಅಸ್ತಿತ್ವದಲ್ಲಿಲ್ಲದ ಸಮಸ್ಯೆಗಳನ್ನು ಕಲ್ಪಿಸಿಕೊ ಳ್ಳುವುದರಿಂದ ಉಂಟಾಗುತ್ತದೆ. ಈ ಭಯಗಳು ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಒತ್ತಡವನ್ನು ಅನುಭವಿಸುವಂತಾಗುತ್ತದೆ ಎಂದರು.


ಯೋಗ, ಧ್ಯಾನ ಮತ್ತು ಆಳವಾದ ಉಸಿರಾಟದ ವ್ಯಾಯಾಮಗಳಿಂದ ಒತ್ತಡ ನಿರ್ವಹಣೆಯ ತಂತ್ರಗಳಲ್ಲಿ ತೊಡಗಿಸಿಕೊಳ್ಳುವುದು ಮನಸ್ಸಿನ ಶಾಂತ ಸ್ಥಿತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಕುಟುಂಬದ ಬೆಂಬಲ ಮತ್ತು ಮಾರ್ಗದರ್ಶನವನ್ನು ಪಡೆಯುವುದು ಮಾನಸಿಕ ಕಾಳಜಿಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಹಾಯ ಮಾಡಲಿದೆ ಎಂದರು.


ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ದಿನನಿತ್ಯದ ಜಂಜಾಟಗಳು, ಒತ್ತಡ, ಆಲೋಚ ನೆಗಳು, ಮಾನಸಿಕ ನೆಮ್ಮದಿ ಕೆಡಿಸುವ ಸಂಗತಿಗಳಿAದಾಗಿ ತುಂಬಾ ಜನರು ಮಾನಸಿಕ ಖಿನ್ನತೆ ಮತ್ತು ಅಸ್ವಸ್ಥತೆಗೆ ಗುರಿಯಾಗುತ್ತಿದ್ದು ಇಂತಹ ಆಲೋಚನೆಗಳಿಗೆ ದಾಸರಾಗದೇ ಹೊರಬರುವ ಮೂಲಕ ಸುಗಮ ಜೀವನ ನಡೆಸಲು ಮುಂದಾಗಬೇಕು ಎಂದು ಸಿಬ್ಬಂದಿಗಳಿಗೆ ಸಲಹೆ ಮಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಒತ್ತಡವು ಜೀವನದ ಒಂದು ಭಾಗವಾಗಿದ್ದರೂ ಅದನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ, ಅದನ್ನು ಸರಿಯಾಗಿ ನಿರ್ವ ಹಿಸಲು ಪ್ರತಿಯೊಬ್ಬರು ಮುಂದಾಗಬೇಕು. ಆಗಮಾತ್ರ ಬದುಕಿನಲ್ಲಿ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗಲಿದೆ ಎಂದು ಸಲಹೆ ಮಾಡಿದರು.


ಜಿಲ್ಲಾ ಮಾನಸಿಕ ಆರೋಗ್ಯ ಚಿಕಿತ್ಸಾ ಮನಶಾಸ್ತçಜ್ಞ ನವೀನ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರಾಗೃಹ ಸಿಬ್ಬಂದಿಗಳು ಹೆಚ್ಚು ಸಮಯವನ್ನು ಇಲಾಖೆಗಳಲ್ಲಿ ಕಳೆದಿರುವ ಹಿನ್ನೆಲೆಯಲ್ಲಿ ಮಾನಸಿಕ ಒತ್ತಡಗಳು ಹೆಚ್ಚಿರಲಿವೆ. ಇದನ್ನು ನಿಭಾಯಿಸಲು ಸಿಬ್ಬಂದಿಗಳು ಮನಸ್ಸನ್ನು ಶಾಂತ ರೀತಿಯಲ್ಲಿ ಇರಿಸಬೇಕು. ಜೊತೆಗೆ ದಿನ ನಿತ್ಯದ ಚಟುವಟಿಕೆಗಳಲ್ಲಿ ವ್ಯಾಯಾಮ ಅಳವಡಿಸಿಕೊಂಡರೆ ಪ್ರತಿನಿತ್ಯವು ಉಲ್ಲಾಸದಿಂದಿರಲು ಸಾಧ್ಯ ಎಂದರು.


ಈ ಸಂದರ್ಭದಲ್ಲಿ ವಂದೇ ಮಾತರಂ ಟ್ರಸ್ಟ್ ಪ್ರೀತ್ರೇಶ್, ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆಯ ಮನೋ ಸಾಮಾಜಿಕ ಕಾರ್ಯಕರ್ತ ಎಸ್.ಹೆಚ್.ಜಯಣ್ಣ, ನರ್ಸಿಂಗ್ ಅಧಿಕಾರಿ ಉಷಾ, ಕಾರಾಗೃಹ ಸಹಾಯಕ ಜೈಲರ್ ಬೊಂಗಾಳೆ, ಆಪ್ತ ಸಮಾಲೋಚಕಿ ಆಶಾ, ಶಿಕ್ಷಕ ರಾಜ್‌ಕುಮಾರ್ ಮತ್ತಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!