ಅಧಿಕಾರ ದುರುಪಯೋಗ ಮಾಡಿಲ್ಲ ; ಸಿ.ಟಿ. ರವಿ

0 0

ಚಿಕ್ಕಮಗಳೂರು: ಜನ ಕೊಟ್ಟ ಅಕಾರವನ್ನು ಎಂದಿಗೂ ದುರುಪಯೋಗಪಡಿಸಿಕೊಡಿಲ್ಲ. ಚಿಕ್ಕಮಗಳೂರಿನ ಅಭಿವೃದ್ಧಿ, ಜನ ಹಿತಕ್ಕೆ ಬಳಸಿಕೊಂಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಮತ್ತು ಶಾಸಕ ಸಿ. ಟಿ. ರವಿ ಹೇಳಿದರು.


ಕ್ಷೇತ್ರದ ದುಂಗೆರೆ, ಎಂಎಂಡಿ ಹಳ್ಳಿ, ದಂಬದಹಳ್ಳಿ, ನಲ್ಲೂರು, ಉಂಡೇದಾಸರಹಳ್ಳಿ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿ, ಸತತವಾಗಿ ಹಲವು ವರ್ಷದಿಂದ ನನ್ನನ್ನು ಗೆಲ್ಲಿಸಿದ್ದೀರಿ, ನನಗಿಂತ ಮೊದಲು ಸಗೀರ್ ಅಹಮದ್ ಅವರು 15 ವರ್ಷ ಶಾಸಕರಾಗಿ, 10 ವರ್ಷ ಮಂತ್ರಿಯಾಗಿದ್ದರು ಸಹ ಉಂಡೇ ದಾಸರಹಳ್ಳಿ ಸೇತುವೆ ನಿರ್ಮಾಣ ಮಾಡಲು ಬಿಜೆಪಿ ಸರಕಾರ ಬರಬೇಕಾಯಿತು. ಕಾಲು ಇಟ್ಟಲೆಲ್ಲ ಎರೆಮಣ್ಣಿನಲ್ಲಿ ಊತುಹೋಗುತ್ತಿದ್ದ ರಸ್ತೆಗಳನ್ನು ಡಾಂಬರ್ ರಸ್ತೆಗಳನ್ನಾಗಿ ಮಾಡಲಾಯಿತು. ರಸ್ತೆ ಮತ್ತು ಸೇತುವೆ ನಿರ್ಮಾಣವಾದ ಮೇಲೆ ಭೂಮಿಯ ಜತೆಗೆ ಜನರ ಬದುಕಿಗೂ ಬೆಲೆ ದೊರೆಯಿತೆಂದರು.


5 ಕೆ. ಜಿ ಅಕ್ಕಿಯ ಜತೆಗೆ 5 ಕೆ. ಜಿ ಸಿರಿದಾನ್ಯ, 75 ಯೂನಿಟ್ ವಿದ್ಯುತ್, 2 ಸಾವಿರ ರೂ. ವಿಧವಾ ವೇತನ 3 ಸಾವಿರ, ವಿಶೇಷಚೇತನರ ವೇತನ ಕೊಡಲು ಪಕ್ಷ ತೀರ್ಮಾನಿಸಿದೆ. ಎಸ್ಸಿ ಎಸ್ಟಿ ಒಳಮೀಸಲಾತಿಯನ್ನು ನೀಡಲಾಗುತ್ತಿದ್ದು, ನನ್ನ ಅವಧಿಯಲ್ಲಿ ಜಿಲ್ಲೆಗೆ 52 ಅಂಬೇಡ್ಕ ರ್ ಭವನವನ್ನು ಮಂಜೂರು ಮಾಡಿಸಲಾಗಿದೆ ಎಂದರು.

Leave A Reply

Your email address will not be published.

error: Content is protected !!