ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ಮುಕ್ತ ರಾಜಕೀಯಕ್ಕೆ ಬದ್ಧ ; ಡಾ.ಸುಂದರ ಗೌಡ

0 0

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ಮುಕ್ತ ಪ್ರಾಮಾಣಿಕತೆಯ ರಾಜಕೀಯ ಪಕ್ಷವಾಗಿ ಕೆಲಸ ಮಾಡಲು ಬದ್ಧವಾಗಿದೆ ಎಂದು ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ|| ಕೆ ಸುಂದರ ಗೌಡ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ದೇಶವನ್ನಾಳಿದ ಎಲ್ಲ ಸರ್ಕಾರಗಳು ಭ್ರಷ್ಟಾಚಾರದ ಮೂಲಕ ನಾಗರಿಕರಿಗೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದರು.
ಆಡಳಿತ ಪಕ್ಷದ ರಾಜಕೀಯ ಮುಖಂಡರು ಅವರ ಅಭಿವೃದ್ಧಿ ಮಾಡಿಕೊಂಡರೆ ಹೊರತು ಮತ ನೀಡಿ ಅಧಿಕಾರ ನೀಡಿದ ಮತದಾರರಿಗೆ ಯಾವುದೇ ರೀತಿಯ ಜನಪರವಾದ ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಇದಕ್ಕೆ ನಿದರ್ಶನ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ
ಶಿವಾನಂದ ಪಾಟೀಲ್ ಹೇಳಿರುವ ಅವಮಾನ ಕಾರಕ ಮಾತುಗಳೆ ಸಾಕ್ಷಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರನ್ನು ಮದ್ಯವ್ಯಸನಕ್ಕೆ ಗುರಿಯಾಗಿ ಕುಡಿದು ಸತ್ತನೆಂದು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿದರು.


ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಲಿಂಗಾರಾಧ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ದಿನೇಶ್, ರಂಗನಾಥ್ ಬಿ.ಪಿ., ಕಾರ್ಯದರ್ಶಿ ಎಂ.ಪಿ ಈರೇಗೌಡ, ಮಾಧ್ಯಮ ಉಸ್ತುವಾರಿಯಾಗಿ ಡಾ|| ಕೆ.ಸುಂದರೇಗೌಡ, ಎಸ್.ಸಿ, ಎಸ್.ಟಿ ಘಟಕದ ಅಧ್ಯಕ್ಷ ಪ್ರಭು, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಸಯ್ಯದ್ ಜಮೀಲ್ ಅಹಮದ್, ಇವರುಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು, ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹಾನಿ ನೇಮಕ ಮಾಡಿದ್ದಾರೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಲಿಂಗಾರಾಧ್ಯ, ಪುಟ್ಟರಾಜು ಇದ್ದರು.

Leave A Reply

Your email address will not be published.

error: Content is protected !!