ಚಿಕ್ಕಮಗಳೂರು: ಇತ್ತೀಚೆಗೆ ರಾಷ್ಟ್ರೀಯ ಭದ್ರತಾ ಪಡೆ ಬ್ಲ್ಯಾಕ್ ಕ್ಯಾಟ್ ವಿಭಾಗಕ್ಕೆ (ಎನ್‌ಎಸ್‌ಜಿ) ಕಮಾಂಡೋ ಆಗಿ ನೇಮಕವಾಗಿದ್ದ ಚಿಕ್ಕಮಗಳೂರಿನ ನವ ವಿವಾಹಿತ ರಜೆ ಮುಗಿಸಿ ಕೆಲಸಕ್ಕೆ ಹೋಗುವಾಗ ದುರಂತವಾಗಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾದಾಗಿಂದ ರಸ್ತೆ ಅಪಘಾತಗಳ ಸಂಖ್ಯೆಯನ್ನು ತೀವ್ರ ಹೆಚ್ಚಳವಾಗುತ್ತಿದೆ. ಇದಕ್ಕೆ ರಸ್ತೆಯಲ್ಲಿ ಮೊದಲ ಮಳೆ ಬಿದ್ದ ನಂತರ ರಸ್ತೆಯಲ್ಲಿ ವಾಹನಗಳು ಜಾರುವ ಹಾಗೂ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಈಗ ಚಿಕ್ಕಮಗಳೂರಿನ ಮೂಲದ ರಾಷ್ಟ್ರೀಯ ಭದ್ರತಾ ಪಡೆಯ ಬ್ಲ್ಯಾಕ್ ಕ್ಯಾಟ್ ವಿಭಾಗದಲ್ಲಿ (National Security Guard-NSG) ಸೇವೆ ಸಲ್ಲಿಸುತ್ತಿದ್ದ ದೀಪಕ್ (22) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
2020ರಲ್ಲಿ ಮದುವೆಯಾಗಿದ್ದ ಕಮ್ಯಾಂಡೋ ದೀಪಕ್:
ಮೃತ ಎನ್‌ಎಸ್‌ಜಿ ಕಮ್ಯಾಂಡೋ ದೀಪಕ್ ತರೀಕೆರೆ ತಾಲೂಕಿನ ತಣಿಗೇಬೈಲು ನಿವಾಸಿ ಆಗಿದ್ದರು. ಇತ್ತೀಚೆಗೆ ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋವಾಗಿ ನೇಮಕವಾಗಿದ್ದರು. ಕಳೆದ 2020ರಲ್ಲಿ ಮದುವೆಯಾಗಿದ್ದ ದೀಪಕ್ ಮನೆಯಲ್ಲಿ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ಒಂದು ತಿಂಗಳ ರಜೆಯನ್ನು ತೆಗೆದುಕೊಂಡು ತವರೂರಿಗೆ ವಾಪಸ್ ಬಂದಿದ್ದರು. ಊರಿಗೆ ಬಂದು ಹೊಸ ಬೈಕ್ ಅನ್ನು ಖರೀದಿ ಮಾಡಿದ್ದರು. ಈಗ ರಜೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕೆಲಸಕ್ಕೆ ಮರಳಿ ಹೋಗಬೇಕಿತ್ತು. ಆದ್ದರಿಂದ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೊಸ ಬೈಕ್‌ನಲ್ಲಿ ಹೋಗುವಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.