ಓಟಿಎಸ್ ಗ್ರಾಹಕರಿಗೆ ಮರುಸಾಲ ಒದಗಿಸಲು ಸಿ.ಎಂ.ಗೆ ಒತ್ತಾಯ

0 31

ಚಿಕ್ಕಮಗಳೂರು : ಬಹುತೇಕ ಎಲ್ಲಾ ಬ್ಯಾಂಕ್‌ಗಳಲ್ಲಿ ಓಟಿಎಸ್ ಆದ ಗ್ರಾಹಕರಿಗೆ ಸಾಲ ದೊರೆಯದಿರುವ ಪರಿಣಾಮ ತೀವ್ರ ಕಂಗಾಲಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಮರುಸಾಲಕ್ಕೆ ಅವಕಾಶ ಕಲ್ಪಿಸಿಕೊ ಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಮುಖಂಡ ಕೆ.ಭರತ್ ಮನವಿ ಸಲ್ಲಿಸಿದರು.


ಈ ಕುರಿತು ಮಾತನಾಡಿದ ಅವರು ಓಟಿಎಸ್ ಗ್ರಾಹಕ ಜಮೀನಿನ ಅಭಿವೃಧ್ದಿ, ಮಕ್ಕಳ ವಿದ್ಯಾಭ್ಯಾಸ ಅಥವಾ ವಾಹನ ಖರೀದಿಯಲ್ಲಿ ಸಾಲ ಪಡೆದುಕೊಂಡು ನಿಗಧಿತ ಸಮಯಕ್ಕೆ ಪೂರ್ಣಗೊಳಿಸದಿದ್ದ ಪಕ್ಷದಲ್ಲಿ ಓನ್ ಟೈಂ ಸೆಟ್ಲ್ಮೆಂಟ್ ಮಾಡಿಕೊಂಡ ಬಳಿಕ ಮೂರು ವರ್ಷಗಳವರೆಗೂ ಆ ಗ್ರಾಹಕರಿಗೆ ಮತ್ಯಾವುದೇ ಸಾಲವನ್ನು ಬ್ಯಾಂಕ್‌ಗಳು ವಿತರಿಸದಿರುವುದು ತೀವ್ರ ಸಮಸ್ಯೆಯಾಗಿದೆ ಎಂದರು.


ನಗರದ ನಿವಾಸಿಗಳು ಅಥವಾ ರೈತರುಗಳು 5 ಸಾವಿರದಿಂದ 1 ಕೋಟಿವರೆಗೂ ಸಾಲ ಪಡೆದುಕೊಂಡು  ಓಟಿಎಸ್‌ನಲ್ಲಿ ಪೂರ್ಣಗೊಂಡರೆ ಆ ಗ್ರಾಹಕರಿಗೆ ಬ್ಯಾಂಕ್‌ನವರು ಮರು ಸಾಲವಿತರಿಸುತ್ತಿಲ್ಲ. ಇದರಿಂದ ಗ್ರಾಹಕರ ಭವಿಷ್ಯದ ಜೀವನ ತೀವ್ರ ಸಂಕಷ್ಟಕ್ಕೆ ದೂಡಿದೆ. ತಮ್ಮ ಹೆಸರಿನಲ್ಲಿ ಕೋಟಿ ಬೆಲೆಬಾಳುವ ಭೂಮಿ ಹೊಂದಿದ್ದರೂ ಕೂಡಾ ಸಾಲ ಪಡೆದುಕೊಳ್ಳದೇ ಕಂಗಾಲಾಗಿದ್ದಾರೆ ಎಂದು ತಿಳಿಸಿದರು.


ಸಮಾಜದಲ್ಲಿ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಒದಗಿಸಲು ಹಣದ ಅವಶ್ಯಕತೆಯಿರುವ ಹಿನ್ನೆಲೆಯಲ್ಲಿ  ಮರು ಸಾಲದ ಸಂಬಂಧ ಬ್ಯಾಂಕ್‌ನವರು ಈ ರೀತಿ ವರ್ತಿಸಿದರೆ ಮುಂದೊAದು ದಿನ ಪೋಷಕರು ಸಹ ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಬ್ಯಾಂಕ್ ಈ ನಡೆಗೆ ಕಡಿವಾಣ ಹಾಕಿ ಓಟಿಎಸ್ ಆದ ಗ್ರಾಹಕರಿಗೆ ಮರು ಸಾಲ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸೋಮಣ್ಣ, ಪುನೀತ್, ಕುಸುಮ ಭರತ್, ರಾಯಿಲ್ ಪಾಷ ಮತ್ತಿತರರಿದ್ದರು.

Leave A Reply

Your email address will not be published.

error: Content is protected !!