‘ಘಾಟ್ ಸ್ಟೇ’ಗೆ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ – 2023

0 9

ಚಿಕ್ಕಮಗಳೂರು : ಬೆಂಗಳೂರಿನ ಇಬಿಸು ಸ್ಟುಡಿಯೋದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಟ್ರೇಡರ್ ಚೇಂಬರ್ ಆಪ್ ಕಾಮರ್ಸ್ ಆಯೋಜಿಸಿದ್ದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ 2023 ಸೀಸನ್ 3 ರಲ್ಲಿ and hospitality ವಿಭಾಗದಲ್ಲಿ ಜಿಲ್ಲೆಯ ಕಳಸ ತಾಲ್ಲೂಕಿನ ಹೊರನಾಡಿನ ಯುವ ಉದ್ಯಮಿ ಸುಜನ್ ಜೈನ್ ಅವರ “ಘಾಟ್ ಸ್ಟೇ” ಬೆಸ್ಟ್ ಹೋಂ ಸ್ಟೇ ಬುಕ್ಕಿಂಗ್ ಪ್ಲಾಟ್ ಫಾರ್ಮ್ ಅವಾರ್ಡ್ ಪಡೆದುಕೊಂಡಿದೆ.

ಅವಾರ್ಡನ್ನು ಘಾಟ್ ಸ್ಟೇಯ ಪೌಂಡರ್ ಸುಜನ್ ಜೈನ್ ಹಾಗೂ ಅವರ ತಾಯಿ ಜಯಲೀಲ ಅವರು ಸ್ವೀಕರಿಸಿದರು.

19 ವರ್ಷದ ಸುಜನ್ ಜೈನ್ ಹೊರನಾಡು ಹೊಸನೆಲ ಮಂಜಪ್ಪ ಮತ್ತು ಜಯಲೀಲ ಅವರ ಪುತ್ರ. ಇನ್ನೂ ವಿದ್ಯಾರ್ಥಿಯಾಗಿರುವ ಸುಜನ್ ಜೈನ್ ಆನ್ ಲೈನ್ ಪ್ಲಾಟ್ ಫಾರ್ಮ್ ಮೂಲಕ ರಾಜ್ಯದಾದ್ಯಂತ ಹೋಂ ಸ್ಟೇ ಮತ್ತು ಹೋಟೆಲ್ ಬುಕ್ಕಿಂಗ್ ವ್ಯವಹಾರ ನಡೆಸುತ್ತಿದ್ದಾರೆ.

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿರುವ ಸುಜನ್ ತಮ್ಮ ವಿದ್ಯಾಭ್ಯಾಸದ ಜೊತೆಜೊತೆಗೆ ವ್ಯವಹಾರ ಕ್ಷೇತ್ರದಲ್ಲಿಯೂ ಯಶಸ್ಸು ಗಳಿಸಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಒಳಗಾಗಿದ್ದಾರೆ.

ಸುಜನ್ ಪ್ರಶಸ್ತಿ ಬಂದ ಹಿನ್ನಲೆಯಲ್ಲಿ ತನ್ನ ಅನಿಸಿಕೆ ಹಂಚಿಕೊಂಡಿದ್ದು, ಶ್ರದ್ಧೆಯಿಂದ ಶ್ರಮ ಪಟ್ಟು ಕೆಲಸ ಮಾಡಿದಾಗ ಜೀವನದಲ್ಲಿ ಯಾವತ್ತೂ ಸೋಲುವ ಮಾತೇ ಬರಲ್ಲ, ನನ್ನ ವ್ಯವಹಾರದಲ್ಲಿ ಸ್ನೇಹಿತರು ಮತ್ತು ಕುಟುಂಬದವರು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ರಾಜ್ಯಮಟ್ಟದಲ್ಲಿ ಗುರುತಿಸಿ ಪ್ರಶಸ್ತಿ ನೀಡಿರುವುದು ನನ್ನ ಉತ್ಸಾಹವನ್ನು ಇಮ್ಮಡಿಗೊಳಸಿದ್ದು, ಉದ್ದಿಮೆಯನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಎಂದು ಹೇಳಿದ್ದಾರೆ.

Leave A Reply

Your email address will not be published.

error: Content is protected !!