ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಸುದ್ದಿಗಳು ಇಲ್ಲಿವೆ

0 0

ಸಮಾಜ ಹಾಗೂ ವ್ಯಕ್ತಿಯ ವ್ಯಕ್ತಿತ್ವ ವಿಕಾಶನಕ್ಕೆ ಭಗವದ್ಗೀತೆ ದಾರಿದೀಪ – ಸುಮಂತ್
ಸಮಾಜದ ಹಾಗೂ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ ಶ್ರೀ ಕೃಷ್ಣನ ಭಗವದ್ಗೀತೆಯೇ ಉತ್ತಮ ದಾರಿದೀಪವಾಗಿದೆ ಎಂದು ತಹಶೀಲ್ದಾರ್ ಸುಮಂತ್ ಅವರು ಹೇಳಿದ್ದಾರೆ.
ಕಲಾಮಂದಿರದಲ್ಲಿ ಇಂದು ನಡೆದ ಶ್ರೀ ಕೃಷ್ಣ ಜಯಂತಿ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ನ್ಯಾಯಯುತವಾಗಿ ಮಾಡುವುದರ ಮೂಲಕ ಶ್ರೀ ಕೃಷ್ಣನ ಸಂದೇಶಗಳನ್ನು ಪಾಲಿಸಬೇಕು ಸಮಾಜದ ಎಲ್ಲ ವಲಯಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯ ಸಮ್ಮತ ತೀರ್ಮಾನಗಳನ್ನು ಹಾಗೂ ಸೂಕ್ಷ್ಮ ಪ್ರಜ್ಞೆಯನ್ನು ಆಳವಡಿಸಿಕೊಂಡು ತಮ್ಮ ತಮ್ಮ ಕರ್ತವ್ಯಗಳನ್ನು ಮಾಡಬೇಕು ಎಂದು ಹೇಳಿದರು.


ಸಾಹಿತಿ ಹೆಚ್.ಎಂ. ನಾಗರಾಜರಾವ್ ಉಪನ್ಯಾಸ ನೀಡಿ ಮಾತನಾಡುತ್ತಿದ್ದ ಅವರು ಈ ನೆಲದಲ್ಲಿ ಶ್ರೀ ಕೃಷ್ಣನಿಗೆ ವಿಶೇಷವಾದ ಸ್ಥಾನ ನೀಡಿದ್ದೇವೆ. ಭರತ ಖಂಡದಿAದ ಹಿಡಿದು ಇಂದಿನವರಿಗೂ ಶ್ರೀ ಕೃಷ್ಣ ಸಂದೇಶಗಳು ಆದರ್ಶಗಳು ಹಾಗೂ ಶ್ರೀ ಕೃಷ್ಣ ಪ್ರಜ್ಞಾವಂತಿಕೆ ಇಂದು ಎಲ್ಲ ರಂಗದಲ್ಲಿ ಕಾಣಬಹುದಾಗಿದೆ ಎಂದ ಅವರು ಭಾರತದ ವ್ಯಕ್ತಿತ್ವ ವಿಕಾಶನಕ್ಕೆ ಶ್ರೀ ಕೃಷ್ಣ ಸಂದೇಶ ಹಾಗೂ ಸಮಾಜಮುಖಿ ಕಾರ್ಯಗಳು ಹಾಗೂ ನಾಶವಾಗದಿರುವ ವಿಚಾರಗಳನ್ನು ಹಿಂದೆಯು ಹಾಗೂ ಮುಂದು ಕೂಡ ಪ್ರಚಲಿತವಾಗಿದೆ. ಶ್ರೀ ಕೃಷ್ಣನು ಈ ನೆಲದ ಮೊದಲ ಪರಿಸರ ಪ್ರೇಮಿ, ಸಾಂಸ್ಕೃತಿ ಹಾಗೂ ಸ್ತ್ರೀ ಪರ ಮತ್ತು ಧರ್ಮ ರಕ್ಷಣೆಗೆ ಸದಾ ಅವರ ನೆನಪು ವಾದ ನುಡಿ ಇಂದಿಗೂ ಅವರು ಪ್ರೇರಪಣೆಯಾಗಿದ್ದಾರೆ ಎಂದು ಹೇಳಿದರು.


ನಗರಸಭಾ ಅಧ್ಯಕ್ಷ ವರಸಿದ್ಧಿವೇಣುಗೋಪಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ಕೃಷ್ಣನು ಒಂದು ಸಮುದಾಯಕ್ಕೆ ಸೀಮಿತ ವಾದವರಲ್ಲ ಸರ್ವ ಜನಾಂಗಕ್ಕೂ ಸರ್ವ ವಿಚಾರಗಳಲ್ಲಿ ಶ್ರೀ ಕೃಷ್ಣನನ್ನು ಕಾಣಬಹುದು ಅವರ ತತ್ವಗಳು ಸಂದೇಶಗಳು ಎಂದಿಗೂ ಪ್ರಸ್ತುತ ಎಂದರು.


ಯಾದವ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಜಿ.ಕೆ. ಬಸವರಾಜ್ ಹಳ್ಳಿಕಾರ್ ಸಂಘದ ಶ್ರೀನಿವಾಸ್, ಸೋಮಶೇಖರ್ ಮತ್ತಿತರ ಸಮುದಾಯದ ಮುಖಂಡರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸಿ. ರಮೇಶ್ ಸ್ವಾಗತಿಸಿ ವಂದಿಸಿದರು.

ದಸರಾ ಕ್ರೀಡಾಕೂಟ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 08 ಮತ್ತು 09 ರಂದು ದಸರಾ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.
ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಸೆಪ್ಟೆಂಬರ್ 08 ರಂದು ಬೆ. 10.00 ಗಂಟೆಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಗೌರವಾನ್ವಿತ ಘನ ಉಪಸ್ಥಿತಿರಿರಲ್ಲಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಮತ್ತು  ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಘನ ಉಪಸ್ಥಿತರಿರಲಿದ್ದಾರೆ, ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
  ರಾಜ್ಯ ಸಭಾ ಸಂಸದರಾದ ಜೈರಾಮ್ ರಮೇಶ್, ಶಾಸಕರುಗಳಾದ  ಟಿ.ಡಿ. ರಾಜೇಗೌಡ, ನಯನ ಮೋಟಮ್ಮ, ವಿಧಾನ ಪರಿಷತ್ ಶಾಸಕರಾದ ಎಸ್.ಎಲ್. ಭೋಜೆಗೌಡ, ನಗರಸಭೆ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಹೆಚ್. ಸಿ. ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಲೋಕಾಯುಕ್ತ ಜನ ಸಂಪರ್ಕ ಸಭೆ
ಚಿಕ್ಕಮಗಳೂರು ಲೋಕಾಯುಕ್ತ ಕಛೇರಿವತಿಯಿಂದ ಸೆಪ್ಟೆಂಬರ್ 13 ರಂದು ಬೆ. 11.00 ಗಂಟೆಗೆ ಕಳಸ ಪಟ್ಟಣದ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಸಭಾಂಗಣದಲ್ಲಿ ಸಾರ್ವಜನಿಕರಿಗಾಗಿ ಲೋಕಾಯುಕ್ತ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಕಛೇರಿ, ಚಿಕ್ಕಮಗಳೂರುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಿಯಾಯತಿ ದರದಲ್ಲಿ ಸಸ್ಯಗಳು ಲಭ್ಯ

2023-24ನೇ ಸಾಲಿನ ತೋಟಗಾರಿಕೆ ಇಲಾಖೆಯ ಅಧೀನದ ಕಡೂರು ಹಾಗೂ ತರೀಕೆರೆ ತಾಲ್ಲೂಕಿನ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಲಭ್ಯವಿರುವ ತೆಂಗಿನ ಸಸಿಗಳ ವಿವರ.
ಹರುವನಹಳ್ಳಿ ತೋಟಗಾರಿಕೆ ಕ್ಷೇತ್ರ, ಕಡೂರು, 7365 ಸಸಿ, ಮೊ.ಸಂ. 8277061764, ಬೇಲೇನಹಳ್ಳಿ ತೋಟಗಾರಿಕೆ ಕ್ಷೇತ್ರ, ತರೀಕೆರೆ, 7798 ಸಸಿ, 9741546502, ಬ್ಯಾಗಡೇಹಳ್ಳಿ ತೋಟಗಾರಿಕೆ ಕ್ಷೇತ್ರ, ಕಡೂರು, 13100 ಸಸಿ, ಮೊ.ಸಂ. 7483041922.
ತೋಟಗಾರಿಕಾ ಕ್ಷೇತ್ರಗಳಲ್ಲಿ ತೆಂಗಿನ ಗಿಡಗಳು ಲಭ್ಯವಿದ್ದು, ಇಲಾಖೆಯ ರಿಯಾಯಿತಿ ದರದಲ್ಲಿ ರೂ. 75/- ರಂತೆ ಪ್ರತಿ ಗಿಡಕ್ಕೆ ಮಾರಾಟ ಮಾಡಲಾಗುತ್ತಿದೆ. ಆಸಕ್ತ ರೈತರು ಸದುಪಯೋಗ ಮಾಡಿಕೊಳ್ಳಲು ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

ಅಪ್ರೆಂಟಿಸ್ ಶಿಪ್ ಮೇಳ
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆಪ್ಟೆಂಬರ್ 11 ರಂದು ಬೆ. 10.00 ಗಂಟೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳವನ್ನು ಆಯೋಜಿಸಲಾಗಿದೆ.
ಮೇಳದಲ್ಲಿ ಬಿ.ಇ., ಪದವಿದರ, ಡಿಪ್ಲೊಮೊ, ಪಿ.ಯು.ಸಿ, ಎಸ್.ಎಸ್.ಎಲ್.ಸಿ, ಮತ್ತು ವಿವಿಧ ವಿದ್ಯಾರ್ಹತೆಯನ್ನು ಹೊಂದಿರುವ ಆಸಕ್ತ ಅರ್ಹ ಅಭ್ಯರ್ಥಿಗಳು ಹಾಗೂ ಐ.ಟಿ.ಐ.ನ ವಿವಿಧ ವೃತ್ತಿಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9611596629, 7411869736, 9945861357 ನ್ನು ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಲು ಕೋರಿಕೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸ್ ದೂರುಗಳ ಪ್ರಾಧಿಕಾರವು 2014ರ ಅಕ್ಟೋಬರ್ 31 ರಂದು ರಚನೆಯಾಗಿದೆ. ಪ್ರಾಧಿಕಾರವು ಪದಾಧಿಕಾರಿಗಳನ್ನು ಹೊಂದಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಕೆ.ಎ.ಎಸ್.ನಿವೃತ್ತ ಅಧಿಕಾರಿ ಎಸ್.ಆರ್.ವೆಂಕಟೇಶ್ ಸದಸ್ಯರಾಗಿ, ಪೊಲೀಸ್ ಅಧೀಕ್ಷಕರು ಸದಸ್ಯ ಕಾರ್ಯದರ್ಶಿಯಾಗಿ, ಮತ್ತು ನಾಗರೀಕ ಸಮಾಜದಿಂದ ನರೇಂದ್ರ ಪೈ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
  ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಡಿವೈಎಸ್‌ಪಿ ಮತ್ತು ಕೆಳಗಿನ ಹಂತದ ಪೊಲೀಸ್ ಅಧಿಕಾರಿ/ಸಿಬ್ಬಂದಿರವರ ಪೊಲೀಸ್ ಅಭಿರಕ್ಷೆಯಲ್ಲಿ ನಡೆದ ಸಾವು, ತೀವ್ರ ಸ್ವರೂಪದ ಗಾಯ ಅಥವಾ ಅತ್ಯಾಚಾರದ ದೂರಿನ ಬಗ್ಗೆ ವಿಚಾರಣೆ ಮಾಡಬಹುದಾಗಿದೆ.
  ಸಾರ್ವಜನಿಕರು ದೂರುಗಳನ್ನು ಜಿಲ್ಲಾಧಿಕಾರಿಗಳ ಕಛೇರಿಯ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷರು ದೂ.ಸಂ.08262-230401, ಜಿಲ್ಲಾ ಪೊಲೀಸ್ ಕಛೇರಿಯ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ದೂ.ಸಂ.08262-230403, ಫ್ಯಾಕ್ಸ್-08262-230540, 235608 ನ್ನು ಇ-ಮೇಲ್ [email protected], www.karnataka.gov.in/spca ಗೆ ಸಲ್ಲಿಸಬಹುದಾಗಿದ್ದು, ಅಡಿಷನಲ್ ಎಸ್.ಪಿ. ಮತ್ತು ಮೇಲಿನ ಹುದ್ದೆಯ ಅಧಿಕಾರಿಗಳ ವಿರುದ್ಧ ಮೇಲೆ ತಿಳಿಸಿದಂತಹ ದೂರು ಸಲ್ಲಿಸುವಂತಿದ್ದಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷರು, ಕೊಠಡಿ ಸಂ.36, ನೆಲಮಹಡಿ, ವಿಕಾಸಸೌಧ, ಬೆಂಗಳೂರು-01, ದೂರವಾಣಿ: 080-22386063, 22034220 ಇವರಿಗೆ ದೂರನ್ನು ಸಲ್ಲಿಸಬಹುದಾಗಿದೆ ಎಂದು ಪೊಲೀಸ್ ಅಧೀಕ್ಷಕರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯುತ್ ನಿಲುಗಡೆ
ಚಿಕ್ಕಮಗಳೂರು ನಗರ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಮಲ್ಲಂದೂರು ರಸ್ತೆಯಲ್ಲಿ ನಗರಸಭೆ ಚಿಕ್ಕಮಗಳೂರು ವತಿಯಿಂದ ಹಾಲಿ ಇರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರ ಮಾಡುವ ಕಾಮಗಾರಿಯನ್ನು ನಿರ್ವಹಿಸಲು 11 ಕೆವಿ ಫೀಡರ್‌ಗೆ ಮಾರ್ಗ ಮುಕ್ತತೆಯನ್ನು ನೀಡಲು ಕ್ರಮವಹಿಸಲಾಗಿರುತ್ತದೆ.
ಸದರಿ ಫೀಡರ್‌ಗಳ ವ್ಯಾಪ್ತಿಗೆ ಬರುವ ನಲ್ಲೂರು, ಮೂಗ್ತಿಹಳ್ಳಿ, ಶಿರುಗುಂದ, ಮತ್ತಾವರ, ಹುಕ್ಕುಂದ, ಜೋಳ್‌ದಾಳ್, ವಿಜಯಪುರ, ಇಂದಾವರ, ಮಾರ್ಕೆಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸೆಪ್ಟೆಂಬರ್ 10 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ವಿದ್ಯುತ್ ಸರಬರಾಜು ನಿಲುಗಡೆ ಉಂಟಾಗುತ್ತದೆ ಎಂದು ಗ್ರಾಮೀಣ ಉಪ ವಿಭಾಗ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾಗಿದ್ದಾರೆ
ಚಿಕ್ಕಮಗಳೂರು ನಗರದ ದಂಟರಮಕ್ಕಿ ವಾಸಿ ಚೇತನ್ ಶ್ರೀಶಾಂತ್ 32 ವರ್ಷ ಸೆಪ್ಟೆಂಬರ್ 04 ರಂದು ಕಾಣೆಯಾಗಿದ್ದಾರೆ ಎಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

5.8 ಅಡಿ ಎತ್ತರ, ದುಂಡು ಮುಖ, ಬಿಳಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ಕಪ್ಪು ತಲೆ ಕೂದಲು ಹೊಂದಿರುತ್ತಾರೆ. ಬೂದು ಬಣ್ಣದ ಪ್ಯಾಂಟ್ ಕಪ್ಪು ಬಣ್ಣದ ಶರ್ಟ್ ಧರಿಸಿರುತ್ತಾರೆ, ಇವರು ಕನ್ನಡ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರು ಪತ್ತೆಯಾದಲ್ಲಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆ ಅಥವಾ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ (ದೂ. ಸಂ. 08262 235333) ಮಾಹಿತಿ ನೀಡುವಂತೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!