ಟ್ರಕ್ಕಿಂಗ್ ಬಂದಿದ್ದ ಯುವಕ ನಾಪತ್ತೆ ; ಬೈಕ್, ಟೀ ಶರ್ಟ್ ಪತ್ತೆ

0 708

ಮೂಡಿಗೆರೆ: ಬೆಂಗಳೂರಿನಿಂದ (Bangalore) ಟ್ರಕ್ಕಿಂಗ್ ಬಂದಿದ್ದ ಯುವಕನೊಬ್ಬ ರಾಣಿಝರಿ ಪಾಯಿಂಟ್ ನಲ್ಲಿ ಬೈಕ್ (Bike) ನಿಲ್ಲಿಸಿ ನಾಪತ್ತೆ (Missing) ಯಾಗಿದ್ದಾನೆ.

ನಾಪತ್ತೆಯಾದ ಯುವಕನನ್ನು ಭರತ್‌ ಎಂದು ಗುರುತಿಸಲಾಗಿದೆ. ಭರತ್‌ ಬಿ.ಇ ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಕಂಪೆನಿ ಅವರನ್ನು 3 ತಿಂಗಳ ಸಂಬಳ ನೀಡಿ ಕೆಲಸದಿಂದ ತೆಗೆದು ಹಾಕಿದೆ. ಇದರಿಂದ ಭರತ್‌ ತನ್ನ‌ ಬೈಕಿನಲ್ಲಿ ಮೂಡಿಗೆರೆ (Mudigere) ತಾಲೂಕಿನ ದುರ್ಗದಹಳ್ಳಿ ರಾಣಿಝರಿ ಪಾಯಿಂಟ್ ಬಂದಿದ್ದರು.

ಮಗನ ಬರುವಿಕೆಗೆ ಕಾದು ಕುಳಿತ ಪೋಷಕರು, ಮಗನನ್ನು ಹುಡುಕಿಕೊಂಡು ಚಿಕ್ಕಮಗಳೂರಿಗೆ (Chikkamagaluru) ಬಂದಿದ್ದಾರೆ. ಇತ್ತ ರಾಣಿಝರಿ ಪಾಯಿಂಟ್ ನಲ್ಲಿ ಭರತ್ ತನ್ನ ಬೈಕ್‌ ನಿಲ್ಲಿಸಿದ್ದು, ಗುಡ್ಡದ ತುದಿಯಲ್ಲಿ ಟೀ ಶರ್ಟ್, ಮೊಬೈಲ್, ಸ್ಲಿಪರ್ ಪತ್ತೆಯಾಗಿದೆ.

ಅನುಮಾನಗೊಂಡಿರುವ ಬಾಳೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಭರತ್‌ ಗಾಗಿ ಹುಡುಕಾಟ ಶುರು ಮಾಡಿದ್ದಾರೆ.

Leave A Reply

Your email address will not be published.

error: Content is protected !!