ಪಟಾಕಿ ಸಿಡಿದು ಯುವಕ ಸಾವು !

0 906

ತರೀಕೆರೆ: ಪಟಾಕಿ (Cracker) ಸಿಡಿದು ಯುವಕ ಸಾವನ್ನಪ್ಪಿರುವ (Died) ಘಟನೆ ತರೀಕೆರೆ (Tharikere) ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಸುಣ್ಣದಹಳ್ಳಿಯ ಪ್ರದೀಪ್ (30) ಎಂದು ಗುರುತಿಸಲಾಗಿದೆ. ದೀಪಾವಳಿ (Deepavali) ಸಂದರ್ಭದಲ್ಲಿದ್ದ ಪ್ರದೀಪ್ ಹಾಗೂ ಮನೆಮಂದಿ ಅಡಿಕೆ ಗೋಟು (ಕಲ್ಲು ಆಟಂಬಾಂಬ್) ಬಾಕ್ಸ್ ಪ್ರದೀಪ್ ಕುರ್ಚಿಯ ಕೆಳಗೆ ಇಟ್ಟುಕೊಂಡಿದ್ದರು. ಈ ವೇಳೆ ಬೇರೆ ಪಟಾಕಿಯ ಕಿಡಿ ಸಿಡಿದು ಕಲ್ಲು ಆಟಂಬಾಂಬ್‌ ಸ್ಫೋಟಗೊಂಡಿದೆ. ಪಟಾಕಿ ಸಿಡಿದ ರಭಸಕ್ಕೆ ಪ್ರದೀಪ್ ನೆಲದಿಂದ 5 ಅಡಿ ಹಾರಿ ಕೆಳಗೆ ಬಿದ್ದಿದ್ದಾರೆ.

ಪಟಾಕಿ ಸ್ಪೋಟದಿಂದ ಜೊತೆಗಿದ್ದ ಪ್ರದೀಪ್ ಅಣ್ಣನ ಮಗ ಕುಶಲ್(12), ಪಕ್ಕದ ಮನೆಯ ದರ್ಶನ್ (19), ಷಣ್ಮುಖ (12) ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಮನೆಯ ಕಿಟಕಿ ಗಾಜುಗಳು ಪುಡಿಯಾಗಿವೆ. ಈ ಬಗ್ಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!