ಪ್ರಧಾನಿ ಮೋದಿಗೆ ದೇಶದಲ್ಲೇ ಸಿಗದಂತಹ ಗಿಫ್ಟ್ ಕೊಟ್ಟ ಕಾಫಿನಾಡಿನ ಅಂಧ ಕ್ರೀಡಾಪಟು !

0 232

ಚಿಕ್ಕಮಗಳೂರು : ಚೀನಾದ ಹಾಂಗೌಜ್‌ನಲ್ಲಿ ನಡೆದ ಪ್ಯಾರಾ ಏಷಿಯನ್ ಗೇಮ್ಸ್ ನಲ್ಲಿ ಎರಡು ಚಿನ್ನದ ಪದಕ ಗೆದ್ದಿರುವ ಜಿಲ್ಲೆಯ ರಕ್ಷಿತಾ ರಾಜು ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯನ್ನು ನೀಡುವ ಮೂಲಕ ಪ್ರಧಾನಿಯವರ ಮನಗೆದ್ದರು.

ಪ್ಯಾರ ಏಷಯನ್ ಗೇಮ್‌ನಲ್ಲಿ ಚಿನ್ನಗೆದ್ದ ಅಂಧ ಓಟಗಾರ್ತಿಯರನ್ನು ಭೇಟಿಯಾದ ವೇಳೆ ರಕ್ಷಿತಾ ರಾಜು ತಾನು ಓಡಲು ಸಹಾಯ ಮಾಡುವ ಅಂದಾಜು ಐದು ಸಾವಿರ ರೂ. ಮೌಲ್ಯದ ಟಿಟ್ಟರ್ ಅನ್ನು ಕೊಡುಗೆಯಾಗಿ ನೀಡಿದರು. ರಕ್ಷಿತಾರಾಜು ಅವರು ಜಿಲ್ಲೆಯ ಮೂಡಿಗೆರೆ ತಾಲೂಕು ಕುಗ್ರಾಮದ ಗುಡ್ನಳ್ಳಿ ಗ್ರಾಮದವರಾಗಿದ್ದಾರೆ.

ಗೈಡ್ ಜತೆ ಸಮಯೋಚಿತವಾಗಿ ಓಡಲು ಸಹಾಯ ಮಾಡುವ ಟಿಟ್ವರ್ ಇದಾಗಿದ್ದು, ರಕ್ಷಿತಾ ರಾಜು ಅವರಿಂದ ಉಡುಗೊರೆ ಪಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದು, ಇದೇ ವೇಳೆ ಪ್ಯಾರಾ ಒಲಂಪಿಕ್‌ನಲ್ಲಿ ಚಿನ್ನದ ಪದಕ ಗೆಲ್ಲುವಂತೆ ಹೇಳಿದರು ಎಂದು ರಕ್ಷಿತಾ ತಿಳಿಸಿದ್ದಾರೆ.

‘ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನು ಭೇಟಿಯಾಗಿದ್ದು ಖುಷಿ ತಂದಿದೆ. ಈ ವೇಳೆ ಟಿಟ್ವರ್‌ ಅನ್ನು ಪ್ರಧಾನಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿದೆ. ಅದು ಏನೆಂದು ಕೇಳಿದರು. ಅವರಿಗೆ ನಾನು ವಿವರಿಸಿ ಹೇಳಿದೆ. ಟಿಟ್ಟರ್ ಇದು ನನ್ನ ಟ್ರೈನಿಂಗ್ ಪಾಟ್ನರ್‌ರಾಗಿದ್ದು ಅದು ತನಗೆ ಎಷ್ಟು ಮುಖ್ಯ ಅದರಿಂದ ನನಗೆ ಏನೇನು ಓಡಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದೆ. 2018 ರಲ್ಲಿ ಇದೇ ಟಿಟ್ಟರ್‌ ಬಳಸಿ ಚಿನ್ನದ ಪದಕ ಗೆದಿದ್ದೆ. ಈ ಬಾರಿಯೂ ಚಿನ್ನದ ಪದಕವನ್ನು ಗೆದಿದ್ದೇನೆ. ಏಷ್ಯನ್ ಗೇಮ್‌ನಲ್ಲಿ ಚಿನ್ನ ಗೆದಿದ್ದರುವಂತೆ ಪ್ಯಾರಾ ಒಲಂಪಿಕ್ ಗೇಮ್ಸ್ ನಲ್ಲು ಚಿನ್ನಗೆಲ್ಲುವಂತೆ ಹೇಳಿದರು. ನಿನ್ನ ಬೆಸ್ಟ್ ಟ್ರೈನಿಂಗ್ ಪಾಟ್ನರ್ ನನಗೆ ಉಡುಗೊರೆಯಾಗಿ ನೀಡಿದ್ದು ಖುಷಿ ತಂದಿದೆ ಎಂದರು ಎಂದು ರಕ್ಷಿತಾ ರಾಜು ತಿಳಿಸಿದರು.

ಏನಿದು ಟಿಟ್ಟರ್ ?

ಅದು ಭಾರತದಲ್ಲಿ ಸಿಗುವುದಿಲ್ಲ. ಅದನ್ನು ರಕ್ಷಿತಾ ರಾಜು ಚೀನಾದಿಂದ ತಂದಿದ್ದರು. ಅದನ್ನು ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಸಮಿತಿ ಸರ್ಟಿಫೈ ಮಾಡಿರುತ್ತದೆ. ಅದೇ ಟಿಟ್ಟರ್ ಧರಿಸಿ ರಕ್ಷಿತಾ ರಾಜು 2018ರಲ್ಲೂ ಚಿನ್ನದ ಪದಕ ಗೆದ್ದಿದರು. ಈಗಲೂ ಚಿನ್ನದ ಪದಕ ಗೆದ್ದಿದ್ದಾರೆ. ಇದರ ಬೆಲೆ 5,500 ರೂ. ತಾನು ಓಡಿ 2 ಚಿನ್ನದ ಪದಕ ಗೆದ್ದ ಅಪರೂಪದ ಟಿಟ್ಟರ್ ಅನ್ನು ರಕ್ಷಿತಾ ರಾಜು ಪ್ರಧಾನಿ ಭೇಟಿ ವೇಳೆ ಮೋದಿಗೆ ನೀಡಿದ್ದಾರೆ.

ಟಿಟ್ಟರ್ ಅಂದ್ರೆ ಅದೊಂದು ಮಾದರಿ ಹಗ್ಗದಂತೆ. ಅಂಧ ಓಟಗಾರರಿಗೂ ಹಾಗೂ ಅವರ ಜೊತೆ ಓಡುವವರಿಗೂ ಈ ಟಿಟ್ಟರ್ ಸಹಾಯ ಮಾಡುತ್ತೆ. ಅಂಧರ ಜೊತೆ ಓಡುವವರು ತಮ್ಮ ಕೈಗೆ ಹಾಕಿಕೊಂಡು ಅವರು ಓಡುವಂತೆಯೇ ಇವರು ಓಡಬೇಕು. ಅವರನ್ನು ಮುಟ್ಟುವಂತಿಲ್ಲ. ಎಳೆದುಕೊಂಡು ಓಡುವಂತಿಲ್ಲ.

ಅಂಧರಿಗಿಂತ ಇವರೇ ಮೊದಲು ಓಡುವಂತಿಲ್ಲ. ಹೀಗೆ ಹತ್ತಾರು ನಿಯಮಗಳ ಮಧ್ಯೆ ಅಂಧ ಓಟಗಾರರು ಹಾಗೂ ಜೊತೆ ಓಟಗಾರರ ಮಧ್ಯೆ ಸಮಯೋಚಿತವಾಗಿ ಓಡಲು ಈ ಟಿಟ್ಟರ್ ಸಹಾಯ ಮಾಡುತ್ತೆ. ಅದನ್ನು ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್ ಸಮಿತಿ ಸರ್ಟಿಫೈ ಮಾಡಿರುತ್ತೆ. ಅದನ್ನೇ ಧರಿಸಬೇಕು. ಅಂಧ ಓಟಗಾರರ ಓಟಕ್ಕೆ ಈ ಟಿಟ್ಟರ್ ಇಲ್ಲ ಅಂದ್ರೆ ಅವರಿಗೆ ಓಡಲು ಅವಕಾಶ ನೀಡುವುದಿಲ್ಲ. ಅಂತಹಾ ಟಿಟ್ಟರ್ ಅನ್ನು ರಕ್ಷಿತಾ ರಾಜು ಪ್ರಧಾನಿ ಮೋದಿಗೆ ಉಡುಗೊರೆ ನೀಡಿದ್ದಾರೆ.

Leave A Reply

Your email address will not be published.

error: Content is protected !!