ಬಡ ರೈತರಿಗೆ ಜಮೀನು ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಸರಕಾರಿ ಭೂಮಿಯನ್ನು ಜಮೀನು ಇಲ್ಲದ ಬಡರೈತರಿಗೆ ವಿತರಣೆ ಮಾಡುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.


ಅಪರ ಜಿಲ್ಲಾಧಿಕಾರಿ ಬಿ. ಆರ್. ರೂಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಘಟನೆಯ ಮುಖಂಡರು ಈ ಬಗ್ಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ 4.530 ಎಕರೆಯಷ್ಟು ಸರಕಾರಿ ಭೂಮಿಯಿದೆ. ಅದು ಕೆಲವೆಡೆ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದ್ದರೆ, ಉಳಿದ ಭೂಮಿ ಅರಣ್ಯ ಇಲಾಖೆ ಮತ್ತು ಬಲಾಡ್ಯರ ಅಧೀನದಲ್ಲಿದೆ ಎಂದರು.

ಜಿಲ್ಲೆಯಲ್ಲಿ ಬಿತ್ತನೆ ಮಾಡಿ ಬೆಳೆ ಬೆಳೆಯಲು ಭೂಮಿ ಅಲ್ಲದೆ ಬಹಳಷ್ಟು ರೈತ ಕುಟುಂಬಗಳು ಕೂಲಿ, ನಾಲಿ ಮಾಡಿ ಬದುಕುತ್ತಿವೆ. ಒಂದು ಹೊತ್ತಿನತುತ್ತಿಗೂ ಆ ಸಂಸಾರಗಳು ಪರದಾಡುತ್ತಿವೆ ಎಂದು ಹೇಳಿದರು.


ಜಿಲ್ಲಾಡಳಿತ ಅರಣ್ಯ ಇಲಾಖೆ ಮತ್ತು ಬಲಾಢ್ಯರ ವಶದಲ್ಲಿರುವ ಸರ್ಕಾರಿ ಭೂಮಿಯನ್ನು ಬಿಡಿಸಿಕೊಂಡು ಅದನ್ನು ಭೂಹೀನ ಬಡರೈತರ ಕುಟುಂಬಗಳಿಗೆ ನೀಡಿದರೆ. ಅವರ ಬದುಕು ಹಸನಾಗುತ್ತದೆ ಎಂದರು.


ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯಾಧ್ಯಕ್ಷ ಸೋಮಾ ನಾಯಕ್, ತಾಲ್ಲೂಕು ಅಧ್ಯಕ್ಷ ಗಿರೀಶ್, ಜಂಟಿ ಕಾರ್ಯದರ್ಶಿ ನಂದನ್, ಸಂಘಟನಾ ಕಾ ರ್ಯದರ್ಶಿ ಯುಸೂಫ್, ಮಹಿಳಾ ಘಟಕದ ಕಾರ್ಯದರ್ಶಿ ಮಂಜುಳಾ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!