ಭಾರೀ ಮಳೆ ಹಿನ್ನೆಲೆ ; ಕಾಫಿನಾಡಿನ ಆಯ್ದ ಶಾಲೆಗಳಿಗೆ ನಾಳೆ ರಜೆ ಘೋಷಣೆ

0 0

ಚಿಕ್ಕಮಗಳೂರು: ಭಾರೀ ಮಳೆ ಹಿನ್ನೆಲೆಯಲ್ಲಿ ಜುಲೈ 7 ಶುಕ್ರವಾರ ತಾಲೂಕಿನ ಆಯ್ದ ಭಾಗದ ಶಾಲೆಗಳಿಗೆ ಚಿಕ್ಕಮಗಳೂರು ಬಿಇಓ ರಜೆ ಘೋಷಿಸಿದ್ದಾರೆ.

ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು, ಆವತಿ ಹೋಬಳಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.


ಮಳೆಯಲ್ಲಿ ಮಕ್ಕಳು ಶಾಲೆಗೆ ಹೋಗಲು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಮಕ್ಕಳ ಸುರಕ್ಷತೆ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ರಜೆ ನೀಡಲಾಗಿದೆ.


ಕಟ್ಟಡಗಳು ಹಳೆಯದಾಗಿದ್ದು ದುರಸ್ಥಿ ಅಗತ್ಯವಿದೆ ಎಂಬ ಕಾರಣವೂ ಮುಖ್ಯವಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ರಜೆ ನೀಡಲಾಗಿದೆ.


ರಜೆ ಆದೇಶ ಹೊರಡಿಸಿದ ಚಿಕ್ಕಮಗಳೂರು ಬಿಇಓ ಎಲ್ಲಾ ಶಾಲೆಗಳಿಗೂ ಈ ಸೂಚನೆ ನೀಡಿದ್ದಾರೆ.

Leave A Reply

Your email address will not be published.

error: Content is protected !!