ಮೂಡಿಗೆರೆ ಕ್ಷೇತ್ರದಿಂದ ನಯನ ಮೋಟಮ್ಮಗೆ ಒಲಿದ ಕಾಂಗ್ರೆಸ್ ಟಿಕೆಟ್
ಚಿಕ್ಕಮಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಶನಿವಾರ ರಿಲೀಸ್ ಮಾಡಿದೆ. ಒಟ್ಟು 49 ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ (SC) ಕ್ಷೇತ್ರಕ್ಕೆ ಮೋಟಮ್ಮ ಅವರ ಪುತ್ರಿ ನಯನ ಜ್ಯೋತಿ ಜವಾರ್ ಮತ್ತು ತರೀಕೆರೆ ಕ್ಷೇತ್ರದಿಂದ ಜಿ. ಹೆಚ್ ಶ್ರೀನಿವಾಸ್ ರವರಿಗೆ ಟಿಕೆಟ್ ನೀಡಲಾಗಿದೆ.
