ಸರ್ಕಾರಿ ಶಾಲೆಗೆ ಮೂಲ ಸೌಕರ್ಯ ಒದಗಿಸಲು ಶಾಸಕರಿಗೆ ಒತ್ತಾಯ

0 0


ಚಿಕ್ಕಮಗಳೂರು : ಶಾಂತಿನಗರದ ಸರ್ಕಾರಿ ಕನ್ನಡ ಶಾಲೆಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಶಾಲೆಯ ಎಸ್‌ಡಿಎಂಸಿ ಮುಖಂಡರುಗಳು ಹಾಗೂ ಶಿಕ್ಷಕರು ಶಾಸಕ ಹೆಚ್.ಡಿ. ತಮ್ಮಯ್ಯ ಅವರಿಗೆ ಶನಿವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.


ಈ ವೇಳೆ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ್ ಉಪ್ಪಳ್ಳಿ, ಸಮೀಪದ ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯು ಪ್ರಾರಂಭವಾಗಿ ಕೆಲವೇ ತಿಂಗಳಲ್ಲಿ 25 ವರ್ಷ ಪೂರ್ಣಗೊಳಿಸಿ ಬೆಳ್ಳಿ ಮಹೋತ್ಸವ ಆಚರಣೆ ತಯಾರಾಗುತ್ತಿರುವ ಹಿನ್ನೆಲೆಯಲ್ಲಿ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.


ಶಾಲೆಯಲ್ಲಿ ಈಗಾಗಲೇ 14 ಕೊಠಡಿಗಳಿದ್ದು ಅನೇಕ ವರ್ಷಗಳಿಂದ ಸುಣ್ಣ-ಬಣ್ಣವಿಲ್ಲದೇ ಮಾಸಿ ಹೋಗಿವೆ.  ಸಣ್ಣಪುಟ್ಟ ದುರಸ್ಥಿ ಕೆಲಸಗಳು ಬಾಕಿಯಿವೆ. ಪ್ರತಿವರ್ಷವು ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಶಾಲೆಗೆ ಸುಣ್ಣಬಣ್ಣದ ಜೊತೆಗೆ ಮಕ್ಕಳ ಕಲಿಕಾ ಆಸಕ್ತಿ ಸೃಷ್ಟಿಸುವ ನಿಟ್ಟಿನಲ್ಲಿ ಗೋಡೆಬರಹಗಳನ್ನು ನಿರ್ಮಿಸಿಕೊಡಬೇಕು ಎಂದು ಹೇಳಿದರು.


ಈ ಶಾಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಹೆಣ್ಣು ಮಕ್ಕಳೇ ಇರುವುದರಿಂದ ಸೂಕ್ತ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಗಂಡುಮಕ್ಕಳು ಸಮೀಪವಿರುವ ಮನೆಗಳಲ್ಲಿ ಶೌಚಾಲಯಕ್ಕೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂ ದಾಗಿ ಕಲಿಕೆಗೆ ತೀವ್ರ ಕುಂಠಿತವಾಗಲಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಶೌಚಾಲಯ ಹಾಗೂ ಸಿಂಟೆಕ್ಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದರು.


ಶಾಲಾವರಣದಲ್ಲಿ ಆಟದ ಮೈದಾನಕ್ಕೆ ಜಾಗವಿದ್ದರೂ ಮಕ್ಕಳ ಆಟೋಟಕ್ಕಾಗಿ ಬಳಸಲು ವ್ಯವಸ್ಥಿತವಾದ ಮೈದಾನವಿಲ್ಲ. ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಮಕ್ಕಳು ತೀವ್ರ ಸಮಸ್ಯೆಯಾಗಿದೆ. ಜೊತೆಗೆ ತಟ್ಟೆ,  ಲೋಟ ಶುಚಿಗೊಳಿಸಲು ವ್ಯವಸ್ಥೆಯಿಲ್ಲ. ಇದೇ ನೀರನ್ನೇ ಮಕ್ಕಳು ಕುಡಿಯಲು ಬಳಸುತ್ತಿರುವ ಪರಿಣಾಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದರು.


ಮಕ್ಕಳಲ್ಲಿ ಕಲಿಕೆ ಪೂರಕವಾದ ಸ್ಮಾರ್ಟ್ ಕ್ಲಾಸ್ ಹಾಗೂ ಪಠ್ಯ, ಪಠ್ಯೇತರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಶಾಲಾವರಣದಲ್ಲಿ ರಂಗಮಂದಿರದ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಶಾಂತಿನಗರದ ಶಾಲೆಯ ಮೂಲ ಸೌಕರ್ಯದಿಂದ ವಂಚಿತವಾಗಿದ್ದು ಇದನ್ನು ಕೂಡಲೇ ಬಗೆಹರಿಸಿ ವಿಜೃಂಭಣೆಯಿಂದ ಬೆಳ್ಳಿ ಮಹೋತ್ಸವ ಆಚರಿ ಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೆ.ಭರತ್, ಶಾಲೆಯ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ತಬಸುಮ್ ಸದಸ್ಯರಾದ ಶ್ವೇತಾ, ಆಯುಷಾ, ಶಿಕ್ಷಕ ಹುಲಿಗೌಡ ಹಾಜರಿದ್ದರು.

Leave A Reply

Your email address will not be published.

error: Content is protected !!