ಸೌಜನ್ಯ ಪ್ರಕರಣ ಸೂಕ್ತ ತನಿಖೆ ನಡೆಸಲು ಮುಖ್ಯಮಂತ್ರಿಗಳಿಗೆ ಒತ್ತಾಯ

0 0


ಚಿಕ್ಕಮಗಳೂರು : ಉಜಿರೆ ಕಾಲೇಜಿನ ಸೌಜನ್ಯ ಅತ್ಯಾಚಾರ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ನೊಂದಿರುವ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ.


ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಚೆ ಮೂಲಕ ಮನವಿ ಸಲ್ಲಿಸಿ ಪತ್ರಿಕಾ ಹೇಳಿಕೆ ನೀಡಿದ ಅವರು ಪ್ರಕರಣ ಸಂಬಂಧ ಮಾನವ ಹಕ್ಕುಗಳ ಆಯೋಗದ ಮುಖಾಂತರ ಸುಪ್ರಿಂಕೋರ್ಟ್ ನ್ಯಾಯಾ  ಧೀಶರು ಮತ್ತು ಹೈಕೋರ್ಟಿನ ನ್ಯಾಯಾಧೀಶರಿಗೆ ಪತ್ರಮುಖೇನ ನ್ಯಾಯಕ್ಕೆ ಒತ್ತಾಯಿಸಲಾಗಿದೆ ಎಂದಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಮತ್ತು ಕೊಲೆಗಳ ಸಂಖ್ಯೆ ಹೆಚ್ಚಾಗುತ್ತಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕೇವಲ ಎರಡು ವರ್ಷಗಳಲ್ಲಿ ಅತಿಹೆಚ್ಚು ಮಹಿಳೆಯರು ಮತ್ತು ಮಕ್ಕಳು ಕಳೆದುಹೋಗಿರುವ ದಾಖಲೆಗಳಿವೆ. ಸತ್ಯ ಕಂಡುಹಿಡಿಯಲು ಭ್ರಷ್ಟ ಮತ್ತು ಒತ್ತಡದ ಸಮಾಜದಲ್ಲಿ ಬಡವರು ನ್ಯಾಯವನ್ನು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದಾಗಿ ಪ್ರಶ್ನಿಸಬೇಕಾಗಿರುವುದು ಪ್ರತಿಯೊಬ್ಬರ ನಾಗರೀಕರ ಹಕ್ಕಾಗಿದೆ ಎಂದಿದ್ದಾರೆ.


ಕೂಡಲೇ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ ನ್ಯಾಯ ವಂಚಿತರಾದ ಸೌಜನ್ಯಳ ಪೋಷ ಕರಿಗೆ ನ್ಯಾಯ ಒದಗಿಸುವ ಮೂಲಕ ಸಂತೋಷ್‌ರಾವ್ ಕುಟುಂಬಕ್ಕೆ ಮಾನವೀಯತೆ ದೃಷ್ಟಿಯಿಂದ ಆಗಿರುವ ನಷ್ಟವನ್ನು ನೀಡುವ ಜೊತೆಗೆ ನಿಜವಾದ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕುವ ಮೂಲಕ ನಾಗರೀಕ ಹಕ್ಕುಗಳನ್ನು ನಿರಾಕರಿಸಿ ಸಮಾಜದಿಂದ ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave A Reply

Your email address will not be published.

error: Content is protected !!