ಹಿಟ್ & ರನ್ ಪ್ರಕರಣ ; ತಪ್ಪಾಯ್ತು ಎಂದು ಕ್ಷಮೆ ಕೇಳಿದ ಹಾಸ್ಯ ನಟ ಚಂದ್ರಪ್ರಭ
ಚಿಕ್ಕಮಗಳೂರು : ಕನ್ನಡ ಕಿರುತೆರೆಯ ‘ಗಿಚ್ಚಿ ಗಿಲಿಗಿಲಿ’ ಶೋ ಮೂಲಕ ಜನಪ್ರಿಯತೆ ಪಡೆದ ಹಾಸ್ಯ ನಟ ಚಂದ್ರಪ್ರಭ ಹಿಟ್ ಅಂಡ್ ರನ್ ಪ್ರಕರಣವೊಂದರಿಂದ ವಿವಾದಕ್ಕೆ ಸಿಲುಕಿದ್ದು ಇದೀಗ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಮಗಳೂರು ಪೊಲೀಸ್ ಠಾಣೆಗೆ ಬಂದು ಕ್ಷಮೆ ಕೇಳಿದ್ದಾರೆ.
ಎರಡು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಮಾಲತೇಶ್ ಚಲಾಯಿಸುತ್ತಿದ್ದ ಸ್ಕೂಟರಿಗೆ ಚಂದ್ರಪ್ರಭ ಅವರ ಕಾರು ಡಿಕ್ಕಿ ಹೊಡೆದು ಕಾರು ನಿಲ್ಲಿಸದೆ ಪರಾರಿಯಾಗಿತ್ತು ಈ ವಿಚಾರವಾಗಿ ಪರಿಶೀಲನೆ ನಡೆಸಿದ ವೇಳೆ ಕಾರು ಹಾಸ್ಯ ನಟ ಚಂದ್ರಪ್ರಭ ಅವರಿಗೆ ಸೇರಿದ್ದು ಎಂದು ಗೊತ್ತಾಗಿದೆ.

ಆದರೆ ಘಟನೆಯ ಬಗ್ಗೆ ಅಂದು ಹೇಳಿಕೆ ನೀಡಿದ್ದ ಚಂದ್ರಪ್ರಭ ಅಪಘಾತ ನಡೆದ ವೇಳೆ ಸ್ಕೂಟರ್ ಸವಾರ ಕುಡಿದ ಮತ್ತಿನಲ್ಲಿದ್ದ ಅಲ್ಲದೆ ಆತನನ್ನು ತಾನೇ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿಕೊಂಡಿದ್ದರು ಅಲ್ಲದೆ ಆಯಂಡ್ ರನ್ ಪ್ರಕರಣದಲ್ಲಿ ವಿವಾದಕ್ಕೆ ಒಳಗಾಗಿದ್ದರು ಆದರೆ ಇಂದು ಚಿಕ್ಕಮಗಳೂರು ಪೊಲೀಸ್ ಠಾಣೆಗೆ ಬಂದ ಚಂದ್ರಪ್ರಭ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ನಾನು ಮಾಡಿದ ಕೆಲಸ ತಪ್ಪಾಯ್ತು ಎಲ್ಲರಿಗೂ ಕ್ಷಮೆ ಕೇಳುತ್ತೇನೆ ಎಂದು ಪೊಲೀಸ್ ಸ್ಟೇಷನ್ ಮುಂಭಾಗ ಕ್ಷಮೆ ಕೇಳಿದ ಚಂದ್ರಪ್ರಭ, ಮಾಲತೇಶ್ ಕುಡಿದಿದ್ದ ಎಂದು ಹೇಳಿದ್ದೆ, ತಪ್ಪಾಯ್ತು…ಕ್ಷಮಿಸಿ, ಆತ ಕುಡಿದಿರಲಿಲ್ಲ, ಅಲ್ಲದೆ ಅಪಘಾತವಾದ ಯುವಕನ ಯೋಗಕ್ಷೇಮದ ಬಗ್ಗೆ ವಿಚಾರಿಸಬೇಕಿತ್ತು ಆದರೆ ಅದನ್ನೂ ಮಾಡಲಿಲ್ಲ ಕ್ಷಮಿಸಿ ಎಂದು ಹೇಳಿದ ಚಂದ್ರಪ್ರಭ ನಾನು ಬಡವ, ತಂದೆ ಸತ್ತು 11 ವರ್ಷವಾಯ್ತು, ನಾವಿಬ್ಬರೂ ದಲಿತರು, ಆಸ್ಪತ್ರೆಗೆ ಹೋಗಿ ಮಾಲತೇಶ್ ಯೋಗಕ್ಷೇಮ ವಿಚಾರಿಸುತ್ತೇನೆ ಅಲ್ಲದೆ ಮಾಲತೇಶ್ ಆಸ್ಪತ್ರೆ ಖರ್ಚಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.