ಕಾಡಾನೆ ಹಾವಳಿಯಿರುವ ಮತಗಟ್ಟೆಗಳಲ್ಲಿ ತಲಾ ಮೂರು ಜನ ಡಿ.ಎಫ್.ಒಗಳ ತಂಡ ರಚನೆ ; ಸಿಇಒ ಜಿ ಪ್ರಭು

0 36

ಚಿಕ್ಕಮಗಳೂರು: ಜಿಲ್ಲೆಯ ಮತದಾರರಿಗೆ ಓಟರ್ ಸ್ಲಿಪ್‍ಗಳನ್ನು ನೀಡಲಾಗಿದ್ದು, 207 ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದ್ದು, ಶೇಕಡವಾರು ಮತದಾನ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಜಿ. ಪ್ರಭು ಹೇಳಿದರು.


ಜಿಲ್ಲೆಯಲ್ಲಿ 100 ಜನ ಹಿರಿಯ ನಾಗರಿಕರನ್ನು ಗುರುತಿಸಿದ್ದು, 52 ಜನರ ಮನೆಗಳಿಗೆ ತೆರಳಿ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುವಂತೆ ಅವರನ್ನು ಗೌರವಿಯುತವಾ ಗಿ ಆಹ್ವಾನಿಸಲಾಗಿದೆ.


ಕಾಡಾನೆ ಹಾವಳಿ ಕಂಡುಬರುವ 80 ಮತಗಟ್ಟೆಗಳನ್ನು ಗುರುತಿಸಿದ್ದು, ಮೂವರು ಡಿ ಎಫ್‍ ಓ ತಂಡ ವನ್ನು ರಚಿಸಲಾಗಿದೆ. ಅರಣ್ಯದಂಚಿನಲ್ಲಿರುವ ಆನೆಗಳನ್ನು ಓಡಿಸಲು ಕೂಂಬಿಂಗ್ ಕಾರ್ಯಕೂಡ ನಡೆಯುತ್ತಿದೆ. ನಕ್ಸಲ್ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದರು.

Leave A Reply

Your email address will not be published.

error: Content is protected !!