ದುರಸ್ತಿ ಕಾಣದೆ ಪ್ರವಾಸಿಗರ ಸಾವನ್ನು ಬಯಸುತ್ತಿರುವ ಹಿರೇಕೊಳಲೆ ಕೆರೆಯ ವೀಕ್ಷಣಾ ಸೇತುವೆ !

0 31

ಚಿಕ್ಕಮಗಳೂರು: ತಾಲ್ಲೂಕಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಹಿರೇಕೊಳಲೆ ಕೆರೆಯ ತುರ್ತು ದುರಸ್ತಿಗೆ ಜಿಲ್ಲಾಡಳಿತ ಕ್ರಮವಹಿಸಬೇಕಾಗಿದೆ.


ಪ್ರವಾಸಿಗರು ಕೆರೆಯ ವಿಹಂಗಮ ನೋಟವನ್ನು ವೀಕ್ಷಿಸಲು ಹಾಗೂ ಪ್ರಸ್ತುತ ಚಿಕ್ಕಮಗಳೂರಿನ ಕೆಲವು ಬಡಾವಣೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಕೆರೆಯ ದಡದಿಂದ ನೀರಿನ ಸ್ವಲ್ಪ ದೂರದವರೆಗೆ ನಿರ್ಮಾಣ ಮಾಡಿರುವ ನೀರಿನ ವಾಲ್ ಮತ್ತು ವೀಕ್ಷಣೆ ಗೋಪುರಕ್ಕೆ ಸಂಪರ್ಕ ಕಲ್ಪಿಸುವ ಸಿಮೆಂಟ್ ನ ಸೇತುವೆಯು ಭಾಗಶಃ ಮುರಿದು ಬೀಳುವ ಹಂತಕ್ಕೆ ತಲುಪಿದೆ.


ಈ ಕೆರೆಯನ್ನು ವೀಕ್ಷಣೆಗೆ ರಜಾದಿನಗಳು ಅಲ್ಲದೆ ಸಾಮಾನ್ಯ ದಿನಗಳಲ್ಲಿಯು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುವುದರ ಜೊತೆಗೆ ಸೇತುವೆ ಮೇಲೆ ನಡೆದಾಡಿ ಪ್ರಾಕೃತಿಯ ಸೌಂದರ್ಯವನ್ನು ಸವಿಯುತ್ತಾರೆ.


ನಿರ್ವಹಣೆಯಿಲ್ಲದೇ ಶಿಥಿಲಾವ್ಯವಸ್ಥೆ ಸೇತುವೆಯನ್ನು
ಜಿಲ್ಲಾಡಳಿತವು ತುರ್ತಾಗಿ ಸಂಬಂಧಿಸಿದ ಸ್ಥಳೀಯ ಗ್ರಾಮ ಪಂಚಾಯತಿಗೆ ಕೆರೆಯ ವೀಕ್ಷಣಾ ಪ್ರದೇಶದ ದುರಸ್ತಿಗೆ ಸೂಚಿಸುವುದು ಅಗತ್ಯವಾಗಿದೆ ನಿರ್ಲಕ್ಷ್ಯ ತೋರಿದರೆ ಸ್ಥಳೀಯರಿಗೆ ಮತ್ತು ಪ್ರವಾಸಿಗರ ಅಪಾಯ ನಿಶ್ಚಿತ.
ಯಾವುದೇ ಭೀತಿಯಿಲ್ಲದೇ ಪ್ರವಾಸಿಗರು ಸೆಲ್ಲಿಗೆ ಮುಗಿಬೀಳುತ್ತಿರುವುದು, ಕೆರೆ ಕೋಡಿಯೂ ಸಹ ಯಾವುದೇ ರಕ್ಷಣೆಯಿಲ್ಲದ ಕಾರಣ ಅಲ್ಲಿ ಹೋಗುವ ಪ್ರವಾಸಿಗರು ಆಯಾ ತಪ್ಪಿ ಕಂದಕಕ್ಕೆ ಬೀಳುವ ಅಪಾಯವಿದೆ ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತಿಲ್ಲ.


ಪ್ರವಾಸಿಗರು ಕೆರೆಗೆ ಭೇಟಿ ನೀಡುವಾಗ ಸೇತುವೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯತಿಯ ಅಧಿಕಾರಿಗಳು ಅಪಾಯ ನಡೆಯುವ ಮುನ್ನವೇ ಸೇತುವೆಯನ್ನು ದುರಸ್ತಿಗೊಳಿಸುವುದು ಉತ್ತಮ ಎಂದು ಪ್ರವಾಸಿಗರದ ಚಿಕ್ಕಮಗಳೂರಿನ ಮಂಜುನಾಥರವರು ಸಲಹೆಯನ್ನು ನೀಡಿದ್ದಾರೆ.

Leave A Reply

Your email address will not be published.

error: Content is protected !!