Categories: Chikkamagaluru

ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಉದಯನಿಧಿ ಪ್ರತಿಕೃತಿ ದಹಿಸಿ ವಿಹೆಚ್‍ಪಿ ಪ್ರತಿಭಟನೆ

ಚಿಕ್ಕಮಗಳೂರು: ಸನಾತನ ಹಿಂದೂ ಧರ್ಮದ ಬಗ್ಗೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಬುಧವಾರ ನಗರದಲ್ಲಿ ಅಜಾದ್ ವೃತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಭಾರತೀಯ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ತಮಿಳುನಾಡಿನ ಸರ್ಕಾರದ ಮಂತ್ರಿಯಾಗಿ ಸ್ವೀಕರಿಸಿದ ಉದಯ ನಿಧಿ ಸ್ಟಾಲಿನ್‌ರವರು ಸೆಪ್ಟೆಂಬರ್ 2. ರಂದು ನಡೆದ ಸತತ ಅಬಾಲಿಷನ್ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿ ಸನಾತನ ಇಂದು ಧರ್ಮವನ್ನು ಮೂಲೋಚ್ಚಾಟನೆ ಮಾಡುವಂತೆ ಹಿಂದೂ ಧರ್ಮವನ್ನು ಸೊಳ್ಳೆ, ಮಲೇರಿಯ, ಡೆಂಗ್ಯೂನಂತಹ ಕಾಯಿಲೆಗೆ ಹೋಲಿಸಿ ಭಾಷಣ ಮಾಡಿರುವುದನ್ನು ಖಂಡಿಸಿದರು.

ಸನಾತನ ಧರ್ಮವನ್ನು ಮೂಲೋಚ್ಚಾಟನೆ ಮಾಡುವಂತಹ ಹೇಳಿಕೆ ನೀಡಿ ಹಿಂದುಗಳನ್ನು ಬೆದರಿಸುವ, ಭಯ ಹುಟ್ಟಿಸುವಂತಹ ಧರ್ಮದ ಆಧಾರದಲ್ಲಿ ಮೂಲೋಚ್ಚಾಟನೆ ಮಾಡುವಂತಹ ಅಪರಾಧ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಧರ್ಮದ ಆಧಾರದಲ್ಲಿ ಸನಾತನಿಗಳ ಡೆಂಗ್ಯೂ, ಮಲೇರಿಯಾಗಳಿಗೆ ಹೋಲಿಸಿ ಉದ್ದೇಶಪೂರ್ವಕ ಅವಮಾನ ಅಪಮಾನ ಮಾನಹಾನಿ ಮಾಡಿದ್ದಾರೆ. ವಿಶ್ವದಾದ್ಯಂತ ಹಿಂದುಗಳ ಭಾವನೆಯನ್ನು ಧಾರ್ಮಿಕತೆಯನ್ನು ಕಾಸಿಗೊಳಿಸಿದ್ದಾರೆ ಎಂದು ಮನವಿಯಲ್ಲಿ ಇರುತ್ತಾರೆ.

ತಮ್ಮ ಈ ಹೇಳಿಕೆಯಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಕದಡಿ ಅಶಾಂತಿಯನ್ನು ದುರುದ್ದೇಶ ಪೂರ್ವಕವಾಗಿ ಮಾಡಿದ್ದು ಸಂವಿಧಾನ ಬದ್ಧವಾದ ಸಚಿವ ಸ್ಥಾನವನ್ನು ಅಲಂಕರಿಸಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಧರ್ಮದ ಮೂಲೋಚ್ಚಾಟನೆ ಮಾಡುವ ಮೂಲಕ ಕರೆ ನೀಡುವ ಮೂಲಕ ದ್ವೇಷಪೂರ್ಣ ಭಾಷಣ ಮಾಡಿ ಸಂವಿಧಾನ ಪ್ರತಿಜ್ಞೆ ಉದ್ದೇಶಪೂರ್ವಕ ಉಲ್ಲಂಘನೆಯಾಗಿದೆ ಎಂದು ದೂರಿದರು.

ಸನಾತನ ಹಿಂದೂ ಸಮಾಜದ ವಿರುದ್ಧ ದ್ವೇಷಪೂರ್ಣ ಭಾಷಣ ಮಾಡಿ ಸನಾತನ ಹಿಂದು ಧರ್ಮವನ್ನು ವಿದ್ವೇಶಕ್ಕೆ ಒಳಪಡಿಸುವ ಸನಾತನ ಹಿಂದೂ ಸಮಾಜದ ವಿರುದ್ಧ ದ್ವೇಷದ ವಾತಾವರಣ ನಿರ್ಮಾಣ ಮಾಡುವ ಭಾಷಣ ಮಾಡಿರುವ ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ವಿ.ಎಚ್.ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಕಾರ್ಯದರ್ಶಿ ರಂಗನಾಥ್ ಜಿಲ್ಲಾ ಸಂಯೋಜಕ ಸಿ.ಡಿ ಶಿವಕುಮಾರ್, ಶಾಮ್, ಯೋಗೀಶ್‌ರಾಜ್ ಅರಸ್, ದಿಲೀಪ್ ಶೆಟ್ಟಿ, ಸುನಿಲ್ ಆಚಾರ್ಯ ಭಾಗವಹಿಸಿದ್ದರು.

Malnad Times

Recent Posts

ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ನದಿಯಲ್ಲಿ ಮುಳುಗಿ ಸಾವು !

ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ನದಿಯಲ್ಲಿ ಮುಳುಗಿ ಸಾವು ! ಕಳಸ : ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿಯೊಬ್ಬಳು ಸ್ನಾನ…

1 hour ago

ತನ್ನೊಂದಿಗೆ ಚರ್ಚೆಗೆ ಬರುವಂತೆ ಅಣ್ಣಾಮಲೈಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್ !

ಶಿವಮೊಗ್ಗ : ಗ್ಯಾರಂಟಿ ಯೋಜನೆಯ ಮೂಲಕ ಕೋಟ್ಯಂತರ ಬಡವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದು ಕಾಂಗ್ರೆಸ್ಸಿನ ಐತಿಹಾಸಿಕ ಕೊಡುಗೆಯಾಗಿದೆ. ಈ…

10 hours ago

ಮತದಾನದಲ್ಲೂ ಶಿವಮೊಗ್ಗ ಎತ್ತರಕ್ಕೇರಲಿ ; ಸ್ನೇಹಲ್ ಸುಧಾಕರ್ ಲೋಖಂಡೆ

ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಮತದಾನ ಪ್ರಮಾಣ ಏರ್ ಬಲೂನ್ ರೀತಿಯಲ್ಲಿ ಆಕಾಶದ ಎತ್ತರಕ್ಕೆ ಏರಲಿ ಎಂದು ಜಿಲ್ಲಾ…

10 hours ago

ಹೃದಯಾಘಾತ ; ಮಮತಾ ನಿಧನ

ಹೊಸನಗರ : ಪಟ್ಟಣದ ಮಾರಿಗುಡ್ಡ ನಿವಾಸಿ ಮಮತಾ ಚಂದ್ರಶೇಖರ್ (43) ಶನಿವಾರ ಬೆಳಿಗ್ಗೆ ತಮ್ಮ ಸ್ವಂತ ಮನೆಯಲ್ಲಿ ಹೃದಯಘಾತದಿಂದ ನಿಧನರಾದರು.…

11 hours ago

ಶ್ರೀಮನ್ಮಹಾರಥೋತ್ಸವ ಜಾತ್ರೋತ್ಸವ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ರಿಪ್ಪನ್‌ಪೇಟೆಯ ಶ್ರೀಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಮತ್ತು ಜಗನ್ಮಾತೆ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಹಾಗೂ ಜಾತ್ರೋತ್ಸವವು…

11 hours ago

ಬಟಾಣಿಜಡ್ಡು ಗ್ರಾಮದಲ್ಲಿ ಭತ್ತದ ಬೆಳೆ ನಾಶಗೊಳಿಸಿದ ಕಾಡಾನೆಗಳು, ಆತಂಕದಲ್ಲಿ ರೈತರು

ರಿಪ್ಪನ್‌ಪೇಟೆ: ಕುಮದ್ವತಿ ನದಿ ತೀರದ ಬಟಾಣಿಜಡ್ಡು ಗ್ರಾಮದ ರೈತ ದಾನಪ್ಪ ಎಂಬುವರ ಭತ್ತದ ಬೆಳೆಗೆ ಎರಡು ಕಾಡಾನೆಗಳು ನುಗ್ಗಿ ಬೇಸಿಗೆ…

13 hours ago