Categories: Chikkamagaluru

ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ರಾಮೋತ್ಸವಕ್ಕೆ ರಾಷ್ಟ್ರೀಯತೆಯ ಛಾಪು, ಯಜ್ಞೇಶ್ವರನ ಮುಂದೆ ಮತದಾನದ ಸಂಕಲ್ಪ-ಪ್ರತಿಜ್ಞೆ

ಚಿಕ್ಕಮಗಳೂರು : ಹಿರೇಮಗಳೂರಿನ ಶ್ರೀಕೋದಂಡರಾಮಚಂದ್ರಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯ ಅಂಗವಾಗಿ ಆಯೋಜಿಸಿದ್ದ ರಾಮ ತಾರಕ ಹೋಮದಲ್ಲಿ ‘ಪ್ರಾಮಾಣಿಕವಾಗಿ ಮತದಾನವ ಮಾಡುವ’ ಪ್ರತಿಜ್ಞಾ ವಿಧಿಯನ್ನು ಯಜ್ಞೇಶ್ವರನ ಮುಂದೆ ಭಕ್ತಾದಿಗಳು ಸ್ವೀಕರಿಸುವ ಮೂಲಕ ಸಂಕಲ್ಪಿಸಿದರು.

ಆಧ್ಯಾತ್ಮಿಕ ಸಾಧಕ ವೈಷ್ಣವಸಿಂಹ ನೇತೃತ್ವದ ವೈದಿಕರ ತಂಡ ಮೂರುಗಂಟೆಗಳ ಕಾಲ ಶ್ರೀರಾಮತಾರಕ ಹೋಮ ನೂರಾರು ಭಕ್ತರ ಶ್ರೀರಾಮ ಜಯರಾಮ ಜಯ ಜಯ ರಾಮ ಮಂತ್ರ ಘೋಷದೊಂದಿಗೆ ನೆರವೇರಿತು.   ಮಧ್ಯಾಹ್ನ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ  ಪೂರ್ಣಾಹುತಿ ಸಮರ್ಪಿಸಲಾಯಿತು. 

ಭಾರತ ದೇಶ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವುದನ್ನು ಪ್ರಸ್ತಾಪಿಸಿದ ಹಿರೇಮಗಳೂರು ಕಣ್ಣನ್ ಮತದಾನ ರಾಷ್ಟ್ರೀಯ ಕರ್ತವ್ಯವೆಂದು ಸಾರಿದರು.  ‘ದೇಶ ದೇಶದ ಎಲ್ಲ ಜನರೂ ಸೌಖ್ಯದಿಂದ ಬಾಳಲಿ.  ಕಾಲ ಕಾಲಕ್ಕೆ ಮಳೆಯು ಸುರಿದು ಸಸ್ಯಶ್ಯಾಮಲೆ ಅರಳಲಿ. ದೀನ ನಾನು ದಾನಿ ನೀನು ನಿನ್ನ ವಸ್ತು ಅರ್ಪಿಪ ಅಪ್ರಮೆಯ ಸ್ವಾಮಿಯೆ, ಶರಣು ಸ್ವಾಮಿ, ಶರಣು ಗುರುವೇ ನಿನ್ನ ನಾಮ ಮಂಗಳ ಎಂಬ ಸಂಕಲ್ಪದ ಜೊತೆಗೆ  ‘ಇದೇ 26ರಂದು ಮತದಾನ ಮಾಡುವ ಮೂಲಕ ರಾಷ್ಟ್ರದ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಕಾಯ್ದುಕೊಳ್ಳುತ್ತೇವೆ. ಕೊರಳಿನ ಮೂಲಕ, ಕರುಳಿನ ಮೂಲಕ, ಬೆರಳಿನ ಮೂಲಕ ಮತಯಂತ್ರವನ್ನು ಒತ್ತಿ ಮತ ಚಲಾಯಿಸಿ  ನಾವೆಲ್ಲರೂ ವಿಶ್ವಮಾನವರಾಗಿ ಭಾರತ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತೇವೆ.  ಪ್ರಾಮಾಣಿಕವಾಗಿ ಮತ ಹಾಕುವ ಮೂಲಕ ಭಾರತದ ಪ್ರಜಾಪ್ರಭುತ್ವಕ್ಕೆ  ಭಗವಂತನ ಸನ್ನಿಧಿಯಲ್ಲಿ  ಉತ್ತಮೋತ್ತಮ ರಾಷ್ಟ್ರೀಯ ಪುರುಷನನ್ನು ಆಯ್ಕೆ ಮಾಡುವುದರ ಮೂಲಕ ಸರ್ವರನ್ನೂ ಸೀತಾರಾಮರು ರಕ್ಷಿಸಲಿ’ ಎಂದೂ ಯಜ್ಞೇಶ್ವರನ ಮುಂದೆ ಸಂಕಲ್ಪಿಸಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಮೂಲಕ ಧಾರ್ಮಿಕ ಉತ್ಸವಕ್ಕೆ ರಾಷ್ಟ್ರೀಯತೆಯ ಛಾಪು ನೀಡಲಾಯಿತು.

ದೆಹಲಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮದ್ದೂರು ನಾಗರಾಜ, ದೇವಸ್ಥಾನದ ಆಡಳಿತ ಮಂಡಳಿ ಸಂಚಾಲಕಿ ರಮಾಮೋಹನ್, ಅಭಿವೃದ್ಧಿ ಟ್ರಸ್ಟ್ ಮುಖ್ಯಸ್ಥ ಗೋಪಿನಾಥ್ ಮತ್ತು ರಂಗನಾಥ, ದಲಿತ ಜನಸೇನಾ ಜಿಲ್ಲಾಧ್ಯಕ್ಷ ಅನಿಲ ಆನಂದ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಇಂಜಿನಿಯರ್ ಗಂಗಾಧರ ಮತ್ತಿತರರು ಸಾಕ್ಷೀಕರಿಸಿದರು.

ಚೈತ್ರ ಶುದ್ಧ ನವಮಿ ಬುಧವಾರ ಪ್ರಾತಃಕಾಲದಲ್ಲಿ ಲಕ್ಷ್ಮಣ ಸಹಿತ ಸೀತಾರಾಮರಿಗೆ ಪಂಚಾಭಿಷೇಕ  ವಿಶೇಷ ಪೂಜೆ ನಡೆಸುವ ಮೂಲಕ ಗುಡಿಯಲ್ಲಿ ರಾಮನವಮಿ ಆರಂಭಗೊಂಡಿತು.

ಎಚ್.ಗೋಪಿನಾಥ ನೇತೃತ್ವದಲ್ಲಿ ಭಜನೆ, ಭಕ್ತಿಗೀತೆಗಳ ಸಮರ್ಪಣೆಯಾಯಿತು. ಸಂಜೆ ಸಾಂಸ್ಕೃತಿಕ ಕಾರ‍್ಯಕ್ರಮಗಳು, ಸೀತಾರಾಮ ಕಲ್ಯಾಣೋತ್ಸವ, ವಸಂತೋತ್ಸವ, ಉಯ್ಯಾಲೆ ಸೇವೆ ನೆರವೇರಿತು. ಬೆಳಗಿನಿಂದ ರಾತ್ರಿಯವರೆಗೂ ವೇಣುಗೋಪಾಲ್ ನೇತೃತ್ವದಲ್ಲಿ ಪ್ರಸಾದ ವಿತರಿಸಲಾಯಿತು. 

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

1 day ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

2 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

2 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago