ಗೋ ಮಾಂಸ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರ ದಾಳಿ ; 6 ಮಂದಿ ಆರೋಪಿಗಳ ಬಂಧನ
ಕಡೂರು : ಅಕ್ರಮ ಗೋ ಮಾಂಸ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಲ್ಲೇಶಪ್ಪ, ಲಕ್ಷ್ಮಣ, ಸಂದೀಪ್, ಕೆಂಚಯ್ಯ, ರಂಗಸ್ವಾಮಿ ಮತ್ತು ಚಂದ್ರಪ್ಪ ಎಂಬ ಆರು ಜನ ಆರೋಪಿಗಳನ್ನು ಸಖರಾಯಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ 60 ಕೆಜಿ ಗೋ ಮಾಂಸ ವಶಕ್ಕೆ ಪಡೆದು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.