ಜೆಡಿಎಸ್‌ ಅಭ್ಯರ್ಥಿ ವೈಎಸ್‌ವಿ ದತ್ತ ವಿರುದ್ಧ 41 ಚೆಕ್‌ಬೌನ್ಸ್‌ ಕೇಸ್ !

0 34

ಕಡೂರು : ಕಡೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ವೈಎಸ್‌ವಿ ದತ್ತ ಅವರ ವಿರುದ್ಧ ಚೆಕ್‌ಬೌನ್ಸ್‌ನ 41 ಪ್ರಕರಣಗಳು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ದಾಖಲಾಗಿವೆ.

ಚೆಕ್‌ ನಗದು ಆಗದಿರುವ ಕಾರಣ ಈ ಎಲ್ಲ ಪ್ರಕರಣಗಳು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ (ಎನ್‌ಐ) ಕಾಯ್ದೆ 1881 ರ ಕಲಂ 138ರ ಅಡಿಯಲ್ಲಿ ದಾಖಲಾಗಿವೆ.

2014ರಿಂದ 2020 ಅವಧಿಯಲ್ಲಿ ಈ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ.

ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ 6 ಪ್ರಕರಣ, ಬೆಂಗಳೂರಿನ ಎಸಿಎಂಎಂ 12, 15,18, 19, 23, 26, 36ನೇ ನ್ಯಾಯಾಲಯಗಳಲ್ಲಿ ತಲಾ ಒಂದು, ಬೆಂಗಳೂರಿನ ಎಸಿಎಂಎಂ 22 ನೇ ನ್ಯಾಯಾಲಯದಲ್ಲಿ ಮೂರು, 42ನೇ ನ್ಯಾಯಾಲಯದಲ್ಲಿ 6 ಪ್ರಕರಣ, ಬೆಂಗಳೂರಿನ ಎಸ್‌ಸಿಸಿಎಚ್‌ 6ನೇ ಮತ್ತು 8ನೇ ನ್ಯಾಯಾಲಯಗಳಲ್ಲಿ ತಲಾ ಒಂದು, ಮಂಗಳೂರಿನ ಜೆಂಎಫ್‌ಸಿ ನ್ಯಾಯಾಲಯದಲ್ಲಿ 5 ಮತ್ತು 4ನೇ ಜೆಎಂಎಫ್‌ಸಿಯಲ್ಲಿ 3 ಪ್ರಕರಣ, ಅಥಣಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಎರಡು, ಹಾಸನ ನ್ಯಾಯಾಲಯದಲ್ಲಿ ಎರಡು, ಹಾಸನ ಜಿಲ್ಲೆ ಬೇಲೂರು, ಹುಬ್ಬಳ್ಳಿ, ಗದಗ ನ್ಯಾಯಾಲಯಗಳಲ್ಲಿ ತಲಾ ಒಂದು. ಅನಂತಪುರ ನ್ಯಾಯಾಲಯದಲ್ಲಿ ಒಂದು, ಗುಂತಕಲ್‌ ನ್ಯಾಯಾಲಯದಲ್ಲಿ ಮೂರು ಪ್ರಕರಣ ದಾಖಲಾಗಿವೆ.

ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಮಾಹಿತಿ ಇದೆ. 2022-23ನೇ ಸಾಲಿನಲ್ಲಿ ಅವರ ವಾರ್ಷಿಕ ಆದಾಯ 8.15 ಲಕ್ಷ ರೂ. ಇತ್ತು. 17.89 ಲಕ್ಷ ರೂ. ಮೌಲ್ಯದ ಚರಾಸ್ತಿ, 2.94 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ 93.19 ಲಕ್ಷ ರೂ. ಸಾಲ ಇದೆ.

Leave A Reply

Your email address will not be published.

error: Content is protected !!