ಪಕ್ಷೇತರ ಅಭ್ಯರ್ಥಿಯಾಗಿ ವೈ.ಎಸ್.ವಿ ದತ್ತಾ ಕಣಕ್ಕೆ !

0 25

ಕಡೂರು : ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬಳಿಕ ಸ್ವಕ್ಷೇತ್ರ ಕಡೂರಿನಲ್ಲಿ ಭಾನುವಾರ ವೈ.ಎಸ್.ವಿ.ದತ್ತಾ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಅಭಿಮಾನಿಗಳ ಸ್ವಾಭಿಮಾನದ ಸಭೆ ಕರೆದಿದ್ದ ದತ್ತಾ, ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬೃಹತ್ ರೋಡ್ ಶೋ ನಡೆಸಿ ಗಮನ ಸೆಳೆದಿದ್ದಾರೆ.

ಕಡೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಗೆ ಜಾಗ ಸಾಲದೆ ಮಂಟಪದ ಕೆಳಭಾಗದಲ್ಲಿ ಎಲ್ ಇಡಿ ವ್ಯವಸ್ಥೆ ಮಾಡಲಾಗಿತ್ತು. ದತ್ತ ಅವರು ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಸಭೆಗೆ ಬಂದರು. ಅಭಿಮಾನಿಗಳನ್ನು ಕಂಡು ನಿಮ್ಮ ಪ್ರೀತಿಗೆ ನಾನು ಋಣಿ ಎಂದರು.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ :

ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧೆ ಮಾಡುವುದಾಗಿ ಸಭೆಯಲ್ಲಿ ದತ್ತಾ ಘೋಷಣೆ ಮಾಡಿದರು. ಟವಲ್ ಗುರುತಿನಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ ಅವರು ಹೆಗಲ ಮೇಲಿದ್ದ ಟವಲ್ ಒಡ್ಡುತ್ತೇನೆ, ಮತ ಭಿಕ್ಷೆ, ಹಣ ನೀಡಿ, ಭಿಕ್ಷೆ ನೀಡಿ ಎಂದು ಬೇಡಿದರು.

ಈ ವೇಳೆ ಅಭಿಮಾನಿಗಳು 50 ಸಾವಿರ, ಲಕ್ಷ, 2 ಲಕ್ಷ ರೂಪಾಯಿಗಳ ಚೆಕ್ ನೀಡಿ,ಮತ್ತಷ್ಟು ಹಣ ಕೊಡುತ್ತೇವೆ ಎಂದು ಅಭಿಮಾನಿಗಳು ಹೇಳಿದರು.

ಸ್ವಾಭಿಮಾನಿ ಸಭೆಯಲ್ಲಿ 4000ಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ.ಅಭಿಮಾನಿಗಳು ದತ್ತ ಅವರಿಗೆ ಸ್ವತಂತ್ರವಾಗಿ ಸ್ಪರ್ಧಿಸಲು ಮನವಿ ಮಾಡಿದ್ದರು. ದತ್ತಾ ಅವರು ಎರಡು ದಿನ ಸಮಯ ಕೇಳಿದ್ದರು.

Leave A Reply

Your email address will not be published.

error: Content is protected !!