Illegal Affair‌ | Murder | ಗಂಡನ ಅನೈತಿಕ ಸಂಬಂಧಕ್ಕೆ ನವ ವಿವಾಹಿತೆ ಬಲಿ…!

0 0

ಕಡೂರು : ಗಂಡನ ಅನೈತಿಕ ಸಂಬಂಧಕ್ಕೆ ನಾಲ್ಕು ತಿಂಗಳ ಹಿಂದಷ್ಟೇ ತಾಳಿ ಕಟ್ಟಿಸಿಕೊಂಡು ಮನೆಗೆ ಬಂದಿದ್ದ ಹೆಂಡತಿ ಬಲಿಯಾದ ಘಟನೆ ತಾಲೂಕಿನ ಸಗಣಿ ಬಸಳ್ಳಿ ಗ್ರಾಮದಲ್ಲಿ ನಡೆದಿದೆ.

ಭಾರತಿ (20) ಹತ್ಯೆಯಾದ ಮಹಿಳೆ. ಮೃತ ಭಾರತಿಯ ಗಂಡನ ಪ್ರಿಯತಮೆ ಮನೆಯ ಹಿಂಭಾಗದ ಹೊಲದಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ.

ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಮಂಜುನಾಥ್ ಎಂಬುವವನ ಜೊತೆ ಭಾರತಿಗೆ ವಿವಾಹವಾಗಿತ್ತು. ಆದ್ರೆ ಮದುವೆಗೆ ಮುಂಚೆಯೇ ಮಂಜುನಾಥನಿಗೆ ಕಾಂತ ಎಂಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಇತ್ತು. ಮಂಜುನಾಥ್ ಮದುವೆಯಾದ ವಿಚಾರ ಕಾಂತಾಳಿಗೆ ತಿಳಿಯುತ್ತಿದ್ದಂತೆ ಆಕೆ ಪ್ರಿಯತಮನ ಮನೆಗೆ ಬಂದು ಆತನ ಹೆಂಡತಿ ಭಾರತಿಯನ್ನು ಮನೆಯ ಹಿಂಭಾಗದ ಹೊಲಕ್ಕೆ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಹತ್ಯೆ ಮಾಡಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ.

ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿ ಮದುವೆಯಾಗಿದ್ದಕ್ಕೆ ಕೊಲೆ ಮಾಡಿದ್ದಾಗಿ ಪೊಲೀಸರ ಬಳಿ ಹೇಳಿದ್ದಾಳೆ. ಇವರ ಅನೈತಿಕ ಸಂಬಂಧಕ್ಕೆ ಏನು ತಿಳಿಯದ ಅಮಾಯಕ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ.

ಭಾರತಿ ಸಂಬಂಧಿಕರು ಮಂಜುನಾಥ್ ವಿರುದ್ಧ ಆಕ್ರೋಶ ಹೊರ ಹಾಕಿದ್ದು ಮಗಳ ಸಾವಿಗೆ ಕಣ್ಣೀರು ಹಾಕಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave A Reply

Your email address will not be published.

error: Content is protected !!