JDS ಅಭ್ಯರ್ಥಿಯ ಕಾರಿನಲ್ಲೇ ಕಂತೆ ಕಂತೆ ಹಣ ಪತ್ತೆ !

0 37

ಕಡೂರು : ವಿಧಾನಸಭೆ ಚುನಾವಣೆ ಹಿನ್ನೆಲೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದು, ಮತದಾರರನ್ನು ಸೆಳೆಯೋದಕ್ಕೆ ಜೆಡಿಎಸ್ ಅಭ್ಯರ್ಥಿಯು ಕೊಂಡೊಯ್ಯುತ್ತಿದ್ದ 9 ಲಕ್ಷ ನಗದು ಜಪ್ತಿ ಮಾಡಲಾಗಿದೆ.

ಕಡೂರು ತಾಲೂಕಿನ ಬಸವನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಕಡೂರು ಜೆಡಿಎಸ್ ಅಭ್ಯರ್ಥಿ ಧನಂಜಯ್ ಅವರಿಗೆ ಸೇರಿದೆ ಎನ್ನಲಾದ 9 ಲಕ್ಷ ಹಣವನ್ನು ಅಧಿಕಾರಿಗಳು ಹಾಗೂ ಪೊಲೀಸರು ಸೀಜ್ ಮಾಡಿದ್ದು, ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚುನಾವಣಾ ಕಣದಲ್ಲಿ ಗಿಫ್ಟ್ ಪಾಲಿಟಿಕ್ಸ್, ಲಕ್ಷಾಂತರ ಮೌಲ್ಯದ ದ್ವಿಚಕ್ರ ವಾಹನಗಳು ಜಪ್ತಿ

ಚಿಕ್ಕಮಗಳೂರು : ಚುನಾವಣಾ ಕಣದಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದ್ದು, ಕಡೂರು ತಾಲೂಕಿನ ಬೀರೂರು ಪಟ್ಟಣದ ಗೋದಾಮಿನಲ್ಲಿ ಇಟ್ಟಿದ್ದ150,000 ಮೌಲ್ಯದ ಫ್ಯಾನ್, ಕುಕ್ಕರ್ ಮಿಕ್ಸರ್ನ್ನು ಸೀಜ್ ಮಾಡಲಾಗಿದೆ. ಇನ್ನುಬ ಇದೇ ಸಂದರ್ಭದಲ್ಲಿ ಜಿಲ್ಲೆಯ ಚೌಳಿ ಹಿರಿಯೂರು ಚೆಕ್ ಪೋಸ್ಟ್ ಬಳಿ ಗೂಡ್ಸ್ ವಾಹನದಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ17.94ಲಕ್ಷ ಮೌಲ್ಯದ 50 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದ್ದು, ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!