ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಗುದ್ದಿದ ಕಾರು !

0 0

ಕಳಸ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಗುದ್ದಿದ ಘಟನೆ ತಾಲೂಕಿನ ಗಂಗನಕುಡಿಕೆ ಗ್ರಾಮದಲ್ಲಿ ನಡೆದಿದೆ.

ಕಾರು ಪ್ರಪಾತದಿಂದ ಉರುಳಿ ಮನೆಯ ಗೋಡೆಗೆ ಗುದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ-ಪುಟ್ಟ ಗಾಯಗಳಾಗಿವೆ.

ಪ್ರವಾಸಿಗರು ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ.

ಪ್ರವಾಸಿಗರು ಬೆಂಗಳೂರು ‌ಮೂಲದವರು. ಸ್ವಲ್ಪ ಆಯ ತಪ್ಪಿದ್ದರು ಕಾರು ಮನೆಯ ಮೇಲೆ ಬೀಳುತ್ತಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಕಾರಿನ ಮುಂಭಾಗ ಮಾತ್ರ ಜಖಂಗೊಂಡಿದೆ. ಈ ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave A Reply

Your email address will not be published.

error: Content is protected !!