Odisha Train Accident ; ಕಾಫಿನಾಡಿನ 110 ಮಂದಿ ಪಾರಾಗಿದ್ದು ಹೇಗೆ ?

0 180

ಕಳಸ : ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ ಸದ್ಯದ ಮಾಹಿತಿ ಪ್ರಕಾರ 233 ಜನರು ಸಾವನ್ನಪ್ಪಿದ್ದು 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇನ್ನು ಅಪಘಾತ ಕೋರಮಂಡಲ್ ಎಕ್ಸ್‌ಪ್ರೆಸ್, ಬೈಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ಮಧ್ಯೆ ಸಂಭವಿಸಿದೆ. ಬೈಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಬೆಂಗಳೂರು) ಹೌರಾ ಎಕ್ಸ್‌ಪ್ರೆಸ್‌ನಲ್ಲಿ 110 ಜನ ಕನ್ನಡಿಗರು ಕೂಡ ಪ್ರಯಾಣಿಸಿದ್ದು, ದುರಂತದಿಂದ ಪಾರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ 110 ಜನ ಬೈಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಬೆಂಗಳೂರಿನಿಂದ ಕೊನೆಯ S5, S6, S7 ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು.

ರೈಲು ನಿನ್ನೆ ಮಧ್ಯಾಹ್ನ ಕೋಲ್ಕತ್ತಾ ಬಳಿ ಇಂಜಿನ್ ಬದಲಿಸಿದೆ. ಇದರಿಂದ ಕಳಸ ತಾಲೂಕಿನ 110 ಜನ ರೈಲಿನ ಮೊದಲ ಬೋಗಿಗೆ ಶಿಫ್ಟ್ ಆಗಿದ್ದರು. ಮೊದಲ ಬೋಗಿಗೆ ಶಿಫ್ಟ್ ಆದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಕೊನೆಯ 4 ಬೋಗಿಗಳಿಗೆ ರೈಲು ಡಿಕ್ಕಿ ಹೊಡೆದಿದೆ. ಇನ್ನು ಈ ನಿಲ್ದಾಣದಿ ರೈಲಿನಲ್ಲಿ 1294 ಪ್ರಯಾಣಿಕರು ತೆರಳಿದ್ದರು. 1294 ಪ್ರಯಾಣಿಕರ ಪೈಕಿ 994 ಜನ ಟಿಕೆಟ್‌ ಬುಕ್ ಮಾಡಿಸಿದ್ದರು.

Leave A Reply

Your email address will not be published.

error: Content is protected !!