OTP ಬರದೇ VOTE ಇಲ್ಲ….

0 33

ಕಳಸ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ರಾಜಕೀಯ ಪಕ್ಷಗಳು ಮತ ಕ್ರೋಢೀಕರಣಕ್ಕೆ, ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಆದರೆ ಮತದಾರ ಜಾಗೃತನಾಗಿದ್ದು, ನಿಮ್ಮ ಆಸೆ-ಆಮೀಷಗಳಿಗೆಲ್ಲ ಬಗ್ಗುವುದಿಲ್ಲ ಎಂದಿದ್ದಾನೆ. ರಾಜ್ಯದ ನಾನಾ ಭಾಗದಲ್ಲಿ ಮತದಾರರು ಮತದಾನವನ್ನು ಬಹಿಷ್ಕರಿಸುತ್ತಿದ್ದಾರೆ. ಇದಕ್ಕೆ ಕಾರಣ ಅಭಿವೃದ್ಧಿ ಕಾಣದ ಊರು, ರಸ್ತೆ ಇತ್ಯಾದಿ. ಈ ಹಿನ್ನೆಲೆ ಈ ಬಾರಿ ನಾವು ಮತದಾನವನ್ನು ಬಹಿಷ್ಕರಿಸಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ. ಇದರಂತೆ ಕಳಸ ತಾಲೂಕಿನ ಬಲಿಗೆ, ಮೆಣಸಿನ ಹ್ಯಾಡದಲ್ಲಿ ಮೊಬೈಲ್ ಟವರ್ ಇಲ್ಲದೆ ಪರದಾಡುತ್ತಿದ್ದು, ಟವರ್‌ಗೆ ಆಗ್ರಹಿಸಿ ಗ್ರಾಮಸ್ಥರು ‘ಒಟಿಪಿ ಬರದೇ ವೋಟಿಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಈ ಗ್ರಾಮದಲ್ಲಿ 70 ಕುಟುಂಬಗಳಿದ್ದು, ಬಿಎಸ್ಎನ್ಎಲ್ ಸೇರಿದಂತೆ ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲದೆ ಜನರು ಪರದಾಡುತ್ತಿದ್ದಾರೆ, ಭರವಸೆ ಬೇಕಿಲ್ಲ, ಮೊಬೈಲ್ ಟವರ್ ನಿರ್ಮಿಸಬೇಕು. ಇಲ್ಲದಿದ್ದರೇ ನಾವು ಮತದಾನವನ್ನು ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

Leave A Reply

Your email address will not be published.

error: Content is protected !!