ಕೊಪ್ಪ : ಅಕ್ರಮ ಮದ್ಯ ಸೇವನೆಯಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂಬ ಆರೋಪ ತಾಲೂಕಿನ ಮೇಗೂರಿನ ಹಿತ್ಲೆಗುಳಿ ಹರಳಾಣೆ ಗ್ರಾಮದಲ್ಲಿ ಕೇಳಿಬಂದಿದ್ದು ಗ್ರಾಮಸ್ಥರು ಮೃತದೇಹ ಇಟ್ಟು ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆ ಸಂಜೆ ಪುಟ್ಟೇಗೌಡ ಎಂಬ ವ್ಯಕ್ತಿ ಮೃತಪಟ್ಟಿದ್ದು, ಇವರ ಸಾವಿಗೆ ಅಕ್ರಮ ಮದ್ಯ ಸೇವನೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಡಿಸಿ, ಎಸ್ಪಿ ಅಗಮಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಮನವಿ ಸಲ್ಲಿಸಿದ್ದರು ತಡೆಯುವಲ್ಲಿ ವಿಫಲವಾದರಿಂದ ನೊಂದ ಗ್ರಾಮದ ಜನರು ಪುಟ್ಟೇಗೌಡ ಅವರ ಮೃತದೇಹವಿಟ್ಟು ಧರಣಿ ಕೂತಿದ್ದಾರೆ.
ಅಕ್ರಮ ಮದ್ಯ ಸೇವನೆಯಿಂದಾಗಿ ಒಂದೇ ತಿಂಗಳಲ್ಲಿ ಮೂರನೇ ಸಾವು ಸಂಭವಿಸಿದೆ. ಇದರಿಂದ ನೊಂದ ಗ್ರಾಮಸ್ಥರು ಆಕ್ರೋಶ ಹೊರಹಾದ್ದಾರೆ. ಸರಿಯಾದ ನ್ಯಾಯ ಒದಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.