ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಳ್ಳುತ್ತಿರುವ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ

0 0

ಮೂಡಿಗೆರೆ: ನಿನ್ನೆಯಷ್ಟೇ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಈಗ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗುತ್ತಿರುವ ಲಭ್ಯವಾಗಿದೆ.


ಮೂಡಿಗೆರೆ ವಿಧಾನಸಭಾ ಕ್ಷೇತ್ರ ಟಿಕೆಟ್ ವಿಚಾರದಲ್ಲಿ ರಾಜ್ಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಪಕ್ಷದ ಹಾಲಿ ಶಾಸಕ ಎಂ ಪಿ ಕುಮಾರಸ್ವಾಮಿಗೆ ಈ ಬಾರಿ ಟಿಕೆಟ್ ನೀಡಬಾರದೆಂಬ ಕೂಗು ಬಿಜೆಪಿಯ ಕೆಲವು ಕಾರ್ಯಕರ್ತರಿಂದಲೇ ಕೇಳಿಬಂದಿತ್ತು. ಇದಾದ ಬಳಿಕ ಕಾರ್ಯಕರ್ತರು ಪಕ್ಷದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಶಾಸಕ ಸಿ. ಟಿ ರವರ ನಿವಾಸಕ್ಕೆ ತೆರಳಿ ಮೂಡಿಗೆರೆಯಲ್ಲಿ ಎಂ ಪಿ ಕುಮಾರಸ್ವಾಮಿ ಹೊರತುಪಡಿಸಿ ಯಾರಿಗೆ ಟಿಕೆಟ್ ನೀಡಿದರೂ ನಾವು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಮನವಿ ಮಾಡಿದ್ದರು. ಬಿಜೆಪಿ ಅಭ್ಯರ್ಥಿಗಳ ಮೊದಲು ಬಿಡುಗಡೆದ 189 ಜನರ ಪಟ್ಟಿಯಲ್ಲಿ ಮೂಡಿಗೆರೆಗೆ ಟಿಕೆಟ್ ಘೋಷಣೆಯಾಗಿರಲಿಲ್ಲ. ಎರಡನೇ ಪಟ್ಟಿಯಲ್ಲಿ ದೀಪಕ್ ದೊಡ್ಡಯ್ಯ ಹೆಸರನ್ನು ಹೈಕಮಾಂಡ್ ಘೋಷಿಸಿತ್ತು.


ಬಿಜೆಪಿ ಮೂಡಿಗೆರೆಯ ಟಿಕೆಟ್ ದೀಪಕ್ ದೊಡ್ಡಯ್ಯ ಅವರಿಗೆ ಘೋಷಣೆ ಮಾಡುತ್ತಿದ್ದಂತೆ ಎಂ ಪಿ ಕುಮಾರಸ್ವಾಮಿ ಪಕ್ಷದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ತನ್ನ ಮುಂದಿನ ನಿರ್ಧಾರವನ್ನು ಮತದಾರರ ಬಳಿ ಕೇಳಿ ನಿರ್ಧರಿಸುತ್ತೇನೆ ಎಂಬ ಮಾತನ್ನು ಹೇಳಿದ್ದರು. ನಂತರ ಗುರುವಾರ ಬಿಜೆಪಿಗೆ ಗುಡ್ ಬೈ ಹೇಳಿದ ಬಳಿಕ ಹಲವಾರು ಜನ ಮುಖಂಡರು ಎಂ ಪಿ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ್ದರು ಎನ್ನಲಾಗಿತ್ತು. ಈಗಾಗಲೇ ಜೆಡಿಎಸ್ ನಿಂದ ಮೂಡಿಗೆರೆ ಟಿಕೆಟ್ ಮಾಜಿ ಸಚಿವ ಬಿ ಬಿ ನಿಂಗಯ್ಯ ಅವರಿಗೆ ಘೋಷಣೆಯಾಗಿದ್ದು. ಆದರೆ ಎಂ ಪಿ ಕುಮಾರಸ್ವಾಮಿ ಜೆಡಿಎಸ್ ಸೇರ್ಪಡೆಯಾದಲ್ಲಿ ನಿಂಗಯ್ಯಾರವರಿಗೆ ಟಿಕೆಟ್ ಕೈತಪ್ಪಿಲಿದೆ ಎಂದು ಹೇಳಲಾಗುತ್ತಿದೆ. ಎಂ ಪಿ ಕುಮಾರಸ್ವಾಮಿ ಜೊತೆ ಬಿಜೆಪಿ ಬೆಂಬಲಿತ ಅವರ ಅಭಿಮಾನಿಗಳೂ ಕೂಡ ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು. ಇಂದು ಸುಮಾರು 11 ಗಂಟೆ ಸುಮಾರಿಗೆ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಇತ್ತೀಚಿಗಷ್ಟೇ ಪಂಚರತ್ನ ರಥಯಾತ್ರೆ ವೇಳೆ ಮಾಜಿ ಸಿಎಂ ಜೆಡಿಎಸ್ ವರಿಷ್ಠ ಹೆಚ್ ಡಿ ಕುಮಾರಸ್ವಾಮಿ ಬಂದಾಗ ಬಿಬಿ ನಿಂಗಯ್ಯ ಅವರಿಗೆ ನೀವು ಕ್ಷೇತ್ರದಲ್ಲಿ ನಿಷ್ಕ್ರಿಯರಾಗಿದ್ದೀರಾ ಹೀಗೆ ಮುಂದುವರೆದಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡುತ್ತೇನೆ ಎಂದು ಹೇಳಿದ್ದರು ಎಂಬ ಊಹಾಪೋಹಗಳು ಹರಿದಾಡಿದ್ದವು. ಇತ್ತೀಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಕಡೂರಿನ ವೈಎಸ್ ವಿ ದತ್ತಾ ಈಗ ಮತ್ತೆ ಮರಳಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಅಲ್ಲಿಯೂ ಜೆಡಿಎಸ್ ಧನಂಜಯ್ ಗೆ ಟಿಕೆಟ್ ಘೋಷಣೆ ಮಾಡಿತ್ತು, ವೈಎಸ್ ವಿ ದತ್ತಾ ಮರಳಿ ಪಕ್ಷಕ್ಕೆ ವಾಪಾಸ್ ಬರ್ತಿದ್ದಂತೆ ಧನಂಜಯ್ ಗೆ ಟಿಕೆಟ್ ಕ್ಯಾನ್ಸಲ್ ಮಾಡಿ ದತ್ತಾ ಅವರಿಗೆ ಘೋಷಣೆ ಮಾಡಿದೆ. ಇದರಿಂದ ಧನಂಜಯ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಎಂಪಿಕೆ ಜೆಡಿಎಸ್ ಸೇರಿದ್ರೆ ಕಡೂರಿನ ರೀತಿಯೇ ಮೂಡಿಗೆರೆಯಲ್ಲೂ ಜೆಡಿಎಸ್ ಟಿಕೆಟ್ ವ್ಯತ್ಯಾಸ ಆಗಲಿವೆ.
ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿ. ಎಂ ಬೊಮ್ಮಾಯಿ ಇದರ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಯಾಗಿದೆ. ಸರ್ವೆ ರಿಪೋರ್ಟ್ ನಿಂದಾಗಿ ಎಂ ಪಿ ಕುಮಾರಸ್ವಾಮಿ ಟಿಕೆಟ್ ಕ್ಯಾನ್ಸಲ್ ಆಗಿದೆ. ಅವರ ಹತ್ತಿರ ನಾನು ಇನ್ನು ಮಾತನಾಡಿಲ್ಲ. ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀನಿ. ಮೂರು ಬಾರಿ ನಮ್ಮ ಪಕ್ಷದಿಂದ ಗೆದ್ದಿದ್ದಾರೆ ಹೀಗಾಗಿ ಕೆಲ ಸಂದರ್ಭದಲ್ಲಿ ಇಂತಹ ಪರಿಸ್ಥಿತಿಯನ್ನ ಎದುರಿಸಬೇಕಾಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದರು.


ಎಂ ಪಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಸಿ.ಟಿ ರವಿ ನನಗೆ ಪಕ್ಷದಲ್ಲಿ ಜವಾಬ್ದಾರಿ ಇರುವುದಕ್ಕಾಗಿ ಹಾಗೇ ಭಾವಿಸಿರುತ್ತಾರೆ. ಇದರ ಬಗ್ಗೆ ನಾನು ಏನು ಕಾಮೆಂಟ್ ಮಾಡೋದಕ್ಕೆ ಬಯಸೋದಿಲ್ಲ. ಒಂದು ವಾರದ ಹಿಂದೆ ಎಂ ಪಿ ಕುಮಾರಸ್ವಾಮಿ ಮನೆಗೆ ಬಂದಿದ್ರು ಅವಾಗ ಕೂಡ ಸ್ಪಷ್ಟವಾಗಿ ಹೇಳಿದ್ದೆ. ನಿನ್ನೆ ಕೂಡ ಬೆಂಗಳೂರು ಮನೆಗೆ ಬಂದಿದ್ರು ಅವಾಗಲೂ ಅವರಿಗೆ ಹೇಳಿದ್ದೆ, 18 ಜನರ ಹೆಸರಿನ ಪಟ್ಟಿಯಲ್ಲಿ ನಿಮ್ದು ಕೂಡ ಇದೆ. ಅವರ ಸರಿ ತಪ್ಪುಗಳನ್ನು ಸಾರ್ವಜನಿಕವಾಗಿ ವಿಶ್ಲೇಷಣೆ ಮಾಡಲ್ಲ ಅವರಿಗೆ ಗೊತ್ತಿದೆ. ಟಿಕೆಟ್ ಕೈತಪ್ಪಿದ ಹಿನ್ನಲೆ ಅವರು ದೂರುದ್ದು ಸ್ವಾಭಾವಿಕ ಅದನ್ನು ನಾನು ತಪ್ಪಾಗಿಯೂ ಭಾವಿಸಲ್ಲ. ಆದರೆ ಐದು ಬಾರಿ ಟಿಕೆಟ್ ಕೊಟ್ಟಿದ್ದು ಭಾರತೀಯ ಜನತಾ ಪಾರ್ಟಿ, ಮೂರು ಬಾರಿ ಶಾಸಕರಾಗುವುದಕ್ಕೆ ಅವಕಾಶ ಕೊಟ್ಟಿದ್ದು ಭಾರತೀಯ ಜನತಾ ಪಾರ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಕ್ಕೂ ಅವಕಾಶ ಕೊಟ್ಟಿದ್ದು ಭಾರತೀಯ ಜನತಾ ಪಾರ್ಟಿ ಅಷ್ಟೆ ಹೇಳಕ್ಕೆ ಭಾವಿಸುತ್ತೇನೆ ಎಂದು ಹೇಳಿದ್ದರು.


ಟಿಕೆಟ್ ಕೈ ತಪ್ಪಿದ ಹಿನ್ನಲೆ ನಿನ್ನೆ ಎಂ ಪಿ ಕುಮಾರಸ್ವಾಮಿ ‘ನನ್ನ ಟಿಕೆಟ್ ತಪ್ಪಿಸಿದ್ದು ಶಾಸಕ ಸಿಟಿ ರವಿ.. ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಇರೋದ್ರಿಂದ ಹೀಗೆ ಮಾಡಿದ್ದಾರೆ’ ಎಂದು ಆರೋಪಿಸಿದ್ದರು.
ಟಿಕೆಟ್ ಕೈತಪ್ಪಿದ ಹಿನ್ನಲೆ ಜೆಡಿಎಸ್ ನ ನಾಯಕರು ಎಂ ಪಿ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ್ದು, ಎಂಪಿಕೆ ಜೆಡಿಎಸ್ ಸೇರೋದು ಬಹುತೇಕ ಪಕ್ಕಾ ಆಗಿದೆ. ಈಗಾಗಲೇ ಜೆಡಿಎಸ್ ನಿಂದ ಟಿಕೆಟ್ ಗಿಟ್ಟಿಸಿಕೊಂಡಿರುವ ಮಾಜಿ ಸಚಿವ ಬಿ. ಬಿ ನಿಂಗಯ್ಯಾಗೆ ಟಿಕೆಟ್ ಕ್ಯಾನ್ಸಲ್ ಆದ್ರೆ ಬಂಡಾಯ ಏಳ್ತಾರಾ? ಅಥವಾ ಹೊಂದಾಣಿಕೆ ಮಾಡಿಕೊಂಡು ಮುಂದುವರಿತಾರಾ ಅನ್ನೋದನ್ನು ಕಾದುನೋಡಬೇಕಿದೆ.

Leave A Reply

Your email address will not be published.

error: Content is protected !!