ಇಲ್ಲಿ ರಸ್ತೆ ಇಲ್ಲದೇ ತೆಪ್ಪದಲ್ಲಿ ಸಂಚಾರ ; ಹಲವು ವರ್ಷಗಳಿಂದ ‘ತಪ್ಪದ ತೆಪ್ಪದ’ ಸಂಚಾರ !

0 0

ಮೂಡಿಗೆರೆ: ರಸ್ತೆ ಸೌಕರ್ಯ ಇಲ್ಲದ ಕಾರಣ ತಾಲ್ಲೂಕಿನ ಅಮ್ತಿ ಹೊಳೆಕೂಡಿಗೆ ಗ್ರಾಮದ ಮಲೆಕುಡಿಯ ಕುಟುಂಬಗಳು ತೆಪ್ಪದಲ್ಲೇ ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಅಮ್ತಿ ಹೊಳೆಕೂಡಿಗೆಯಲ್ಲಿ ನಾಲ್ಕು ಮಲೆಕುಡಿಯ ಕುಟುಂಬಗಳು ವಾಸವಾಗಿದ್ದು ಮನೆಗಳ ಸುತ್ತ ಭದ್ರಾನದಿ ಆವರಿಸಿರುವುದರಿಂದ ಮುಖ್ಯ ರಸ್ತೆಗೆ ಸಂಪರ್ಕ ಇಲ್ಲದಂತಾಗಿದೆ.

ಮನೆ ಕಟ್ಟಲು ಮರಳು, ಇಟ್ಟಿಗೆ ಮುಂತಾದ ಕಚ್ಚಾವಸ್ತುಗಳನ್ನು ತೆಪ್ಪದಲ್ಲೆ ತರಬೇಕಾಗಿದೆ. 2015 ರಿಂದ ರಸ್ತೆಗಾಗಿ ಹೋರಾಟ ಮಾಡಿಕೊಂಡು ಬಂದಿದ್ದರೂ ರಸ್ತೆ ಅಥವಾ ತೂಗು ಸೇತುವೆ ನಿರ್ಮಾಣವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.


ಹಲವು ಅಧಿಕಾರಿಗಳು, ಜನಪ್ರತಿನಿಗಳು ಗ್ರಾಮಕ್ಕೆ ಬಂದರೂ ಕೇವಲ ಭರವಸೆ ನೀಡಿ ಹೋಗುತ್ತಾರೆ. ಜನಪ್ರತಿನಿಗಳ, ಅಧಿಕಾರಿಗಳ ಭರವಸೆ ಕೇಳಿ ಸಾಕಾಗಿದೆ. ಆದ್ದರಿಂದ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!