ಕಂಠ ಪೂರ್ತಿ ಕುಡಿದು ಆಟೋ ಓಡಿಸಿದ ; ಬಿದ್ದು ಎದ್ದು ಆಟೋ ಹುಡುಕಿದ..!

0 10

ಮೂಡಿಗೆರೆ : ವ್ಯಕ್ತಿಯೋರ್ವ ಚಲಾಯಿಸುತ್ತಿದ್ದ ಆಟೋ, ತನ್ನ ಮಾಲಿಕನಂತೆಯೇ ತೂರಾಡುತ್ತಾ ರಸ್ತೆಯಲ್ಲಿ ಸಂಚರಿಸಿ ಕೊನೆಗೆ ತನ್ನ ಮಾಲಿಕನನ್ನು ಹೊರಗೆಸೆದು ತಾನು ಗುಂಡಿಗೆ ಬಿದ್ದ ಘಟನೆಯೊಂದು ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ನಡೆದಿರೋದು ಮೂಡಿಗೆರೆ ತಾಲೂಕಿನ ಚಂಡಗೋಡು ಗ್ರಾಮದಲ್ಲಿ. ಆಟೋ ಚಾಲಕ ಆಟೋವನ್ನು ರಸ್ತೆ ಇಡೀ ಚಲಾಯಿಸಿದ್ದಾನೆ. ಕೊನೆಗೆ ನಿಯಂತ್ರಣ ತಪ್ಪಿ ತಾನೇ ಆಟೋದಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆಟೋ ಹೊಂಡಕ್ಕೆ ಬಿದ್ದಿದೆ.

ವ್ಯಕ್ತಿ ಮದ್ಯ ಸೇವಿಸಿ ಆಟೋ ಚಲಾಯಿಸಿರುವಂತೆ ಕಂಡು ಬಂದಿದೆ.  ಈ ಆಟೋದಲ್ಲಿ ಯಾರಾದ್ರೂ ಇದ್ದಿದ್ರೆ ಅಥವಾ ಎದುರಿನಿಂದ ಯಾವುದಾದ್ರು ವಾಹನ ಬಂದಿದ್ದಿದ್ರೆ, ಅವರ ಪ್ರಾಣಕ್ಕೂ ಅಪಾಯ ಸಂಭವಿಸುತ್ತಿತ್ತು.

Leave A Reply

Your email address will not be published.

error: Content is protected !!