ಕಾರು, ಸ್ಕೂಟಿ ನಡುವೆ ಅಪಘಾತ ; ಸವಾರನ ಸ್ಥಿತಿ ಗಂಭೀರ

0 0

ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 73 ರ ಚಕ್ಕಮಕ್ಕಿಯಲ್ಲಿ ಮಂಗಳವಾರ ನಡೆದಿದೆ.


ಫಲ್ಗುಣಿ ಮೂಲದ ಸ್ಕೂಟಿ ಸವಾರ ಬೊಮ್ಮಯ್ಯ ಗಂಭೀರ ಗಾಯಗೊಂಡಿದ್ದು ಕೂಡಲೇ ಸಾರ್ವಜನಿಕರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಧರ್ಮಸ್ಥಳದಿಂದ ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದ ಕಾರು ಹಾಗೂ ಫಲ್ಗುಣಿ ಕಡೆಯಿಂದ ಚಕ್ಕಮಕ್ಕಿ ಕಡೆಗೆ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.

ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!