ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಬಿಜೆಪಿಗೆ ಗುಡ್ ಬೈ ; ಶಾಸಕ ಸ್ಥಾನಕ್ಕೂ ರಾಜೀನಾಮೆ
ಮೂಡಿಗೆರೆ : ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ ಈ ನಿಟ್ಟಿನಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಶಾಸಕರು ಜೆಡಿಎಸ್ ಸೇರುವ ಸಾಧ್ಯತೆ ಅಧಿಕವಾಗಿದೆ ಎನ್ನಲಾಗಿದೆ.

ಈ ಬಗ್ಗೆ ಬೆಳವಣಿಗೆ ಬಗ್ಗೆ ಸ್ವತಃ ಎಂ.ಪಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಇಂತಹ ಬೆಳವಣಿಗೆ ನಿರೀಕ್ಷೆ ಇತ್ತು. ಪಕ್ಷದಿಂದ ಟಿಕೆಟ್ ದೊರೆಯುವುದಿಲ್ಲ ಎಂಬ ಅನುಮಾನವಿತ್ತು. ನನ್ನ ಮತ್ತು ಸಿ,ಟಿ, ರವಿ ಮಧ್ಯೆ ಸಂಘರ್ಷ ಇತ್ತು. ಆದರೆ ಪಕ್ಷದ ಹಿತದೃಷ್ಟಿಯಿಂದ ನಾನು ಎಲ್ಲ ನೋವು ನುಂಗಿಕೊಂಡು ಸುಮ್ಮನಿದ್ದೆ. ಸಿ.ಟಿ. ರವಿ ರವಿ ನಾನೆ ಹೇಳಿದಂತೆ ಎಲ್ಲರೂ ಕೇಳಬೇಕು ಎಂಬ ಸರ್ವಾಧಿಕಾರಿ ಮನೋಭಾವ ಹೊಂದಿದವರು. ಬಿಜೆಪಿಯನ್ನು ಮುಳುಗಿಸುವುದೇ ಅವರ ಉದ್ದೇಶ ಎಂದು ಹೇಳಿದರು.
ಬಿಜೆಪಿ ಮುಖಂಡ, ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಒಂದು ವಾರ ಮೊಬೈಲ್ ಸ್ವಿಚ್ ಆಫ್ ಮಾಡಿದಲ್ಲಿ ಬಿಜೆಪಿ 50 ಸೀಟು ಗೆಲ್ಲುವುದಿಲ್ಲ ಎಂದು ಕುಮಾರಸ್ವಾಮಿ ಈ ವೇಳೆ ಹೇಳಿದರು. ನಾನು ಸನ್ಯಾಸಿ ಅಲ್ಲ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಬಲ ಮೂರು ಜನ ಆಕಾಂಕ್ಷಿಗಳಿದ್ದರು. ಹಾಕಿ ಶಾಸಕ ಕುಮಾರಸ್ವಾಮಿ ಸೇರಿ ದೀಪಕ್ ದೊಡ್ಡಯ್ಯ, ವಿಜಯ ಕುಮಾರ್ ಅವರು ಟಿಕೆಟ್ ಗಾಗಿ ರೇಸ್ನಲ್ಲಿದ್ದರು. ಆದ್ರೆ ಕೊನೆಗೆ ಹಾಲಿ ಶಾಸಕರನ್ನು ಕೈ ಬಿಟ್ಟು ದೀಪಕ್ ದೊಡ್ಡಯ್ಯ ಅವರಿಗೆ ಪಕ್ಷ ಟಿಕೆಟ್ ನೀಡಿದೆ.