ಕುಡಿದು ಫುಲ್ ಟೈಟಾಗಿ ಶಾಸಕರಿಗೆ ಮನವಿ ಪತ್ರ ‌ಕೊಡಲು ಬಂದಿದ್ದ ಪ್ರಾಂಶುಪಾಲ ಅಮಾನತು !

0 1

ಎನ್‌.ಆರ್ ಪುರ : ಮದ್ಯಪಾನ ಮಾಡಿ ಶಾಸಕರಿಗೆ ಮನವಿ ಪತ್ರ ನೀಡಲು ಬಂದ ವಸತಿ ಶಾಲೆಯ ಪ್ರಾಂಶುಪಾಲನನ್ನು ಅಮಾನತು ಮಾಡಿದ ಘಟನೆ ಎನ್.ಆರ್. ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಅಮಾನತುಗೊಂಡ ಪ್ರಾಂಶುಪಾಲನನ್ನು ಲೋಕನಾಯ್ಕ ಎಂದು ಗುರುತಿಸಲಾಗಿದೆ.

ಸಿಂಸೆ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲನಾಗಿದ್ದ ಈತ ವಸತಿ ಶಾಲೆಯ ಸಮಸ್ಯೆ ಬಗ್ಗೆ ಮನವಿ ಪತ್ರ ನೀಡಲು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಅವರ ಬಳಿಗೆ ಬಂದಿದ್ದ. ಈ ವೇಳೆ ಪ್ರಾಂಶುಪಾಲ ಮದ್ಯಪಾನ ಮಾಡಿರುವುದು ಶಾಸಕರ ಗಮನಕ್ಕೆ ಬಂದಿದ್ದು, ಕೋಪಗೊಂಡ ಶಾಸಕ ಪೊಲೀಸರನ್ನು ಕರೆಸಿ ಪ್ರಾಂಶುಪಾಲನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ಒತ್ತಾಯಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಯಲ್ಲಿ ಹಾಗೂ ಬ್ರೀಥಿಂಗ್ ಅಲ್ಕೋಹಾಲ್ ಅನಲೈಸರ್ ಮೂಲಕ ಮದ್ಯಪಾನದ ತಪಾಸಣೆ ಮಾಡಿದಾಗ ಮದ್ಯಪಾನ ಮಾಡಿರುವುದು ದೃಢವಾದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಅಮಾನತು ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.

error: Content is protected !!