ನಾಯಿ ನುಂಗಿ ಮುಂದೆ ಚಲಿಸಲಾಗದೆ ಒದ್ದಾಡುತ್ತಿದ್ದ ಹೆಬ್ಬಾವು ರಕ್ಷಣೆ

0 0

ಎನ್.ಆರ್.ಪುರ : ನಾಯಿಯನ್ನು ನುಂಗಿ ಮುಂದೆ ಚಲಿಸಲಾಗದೇ ನರಳಾಡುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ತಾಲೂಕಿನ ಹಂತುವಾನಿ ಗ್ರಾಮದಲ್ಲಿ ರಕ್ಷಣೆ ಮಾಡಲಾಗಿದೆ.


15 ಅಡಿ ಉದ್ದ ಹಾಗೂ 60 ಕೆ.ಜಿ. ತೂಕವುಳ್ಳ ಹೆಬ್ಬಾವು ಹಂತುವಾನಿ ಗ್ರಾಮದ ಶ್ರೀಮತಿ ಎಂಬುವರ ಮನೆ ಪಕ್ಕದಲ್ಲಿ ಕಾಣಿಸಿಕೊಂಡಿತು. ನಾಯಿಯನ್ನು ನುಂಗಿದ್ದರಿಂದ ಓಡಾಡಲು ಆಗದೆ ಒಂದೇ ಕಡೆ ಮಲಗಿತ್ತು. ಮುಂದೆ ಚಲಿಸುವ ಪ್ರಯತ್ನ ಮಾಡಿದರೂ ಅದರ ಕೈಯಲ್ಲಿ ಆಗದೇ ನರಳಾಡುತ್ತಿತ್ತು.

ಹೆಬ್ಬಾವನ್ನು ನೋಡಿ ಶ್ರೀಮತಿ ಅವರು ತಕ್ಷಣ ಉರಗತಜ್ಞ ಹರೀಂದ್ರ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಹರೀಂದ್ರ ಅವರು ಅರಣ್ಯ ಅಧಿಕಾರಿ ರಾಘವೇಂದ್ರ ಅವರ ಸಮ್ಮುಖದಲ್ಲಿ ಹೆಬ್ಬಾವನ್ನು ರಕ್ಷಿಸಿ, ಮರಳಿ ಅರಣ್ಯಕ್ಕೆ ಬಿಡಲಾಯಿತು.

ಹೆಬ್ಬಾವನ್ನು ರಕ್ಷಣೆ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಗಾತ್ರ ಹಾವನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

Leave A Reply

Your email address will not be published.

error: Content is protected !!